ಮಣಿಪುರದ ಚುರಾಚಂದ್ಪುರ ಎಸ್ಪಿ ಕಚೇರಿಗೆ ಗುರುವಾರ ರಾತ್ರಿ ಗುಂಪೊಂದು ನುಗ್ಗಲು ಪ್ರಯತ್ನಿಸಿದಾಗ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 300-400 ಜನರ ಗುಂಪು ಎಸ್ಪಿ ಸಿಸಿಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು, ಕಲ್ಲು ತೂರಾಟ ನಡೆಸಿತು ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
“ಪರಿಸ್ಥಿತಿಯನ್ನು ನಿಯಂತ್ರಿಸಲು ಆರ್ಎಎಫ್ ಸೇರಿದಂತೆ ಎಸ್ಎಫ್ (ಭದ್ರತಾ ಪಡೆಗಳು) ಅಶ್ರುವಾಯು ಶೆಲ್ ಹಾರಿಸುವ ಮೂಲಕ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊ ಪ್ರಸಾರವಾದ ನಂತರ ಚುರಾಚಂದ್ಪುರ ಎಸ್ಪಿ ಶಿವಾನಂದ ಸುರ್ವೆ ಅವರು ಹೆಡ್ ಕಾನ್ಸ್ಟೇಬಲ್ ಸಿಯಾಮ್ಲಾಲ್ಪಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ಬರುವವರೆಗೆ ಅಮಾನತುಗೊಳಿಸಿದ್ದಾರೆ.