ಬಿಜೆಪಿಯ 44 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಳೆಯ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘ಇಂಡಿಯನ್ ಹಿಸ್ಟರಿ ಪಿಕ್ಸ್’ ಟ್ವಿಟರ್‌ನಲ್ಲಿ ಹಂಚಿಕೊಂಡ ವೈರಲ್ ಚಿತ್ರವು ಹೆಚ್ಚು ರೀಟ್ವೀಟ್ ಆಗಿದೆ.
ಈ ಫೋಟೋವನ್ನು 1989 ರಲ್ಲಿ ತೆಗೆದದ್ದು ಎಂದು ನಂಬಲಾಗಿದೆ. ಬಿಜೆಪಿ ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ನರೇಂದ್ರ ಮೋದಿ ಪರಸ್ಪರ ಹತ್ತಿರ ಕುಳಿತಿರುವುದನ್ನು ಕಾಣಬಹುದು. ಅವರ ಹಿಂದೆ ಪಕ್ಷದ ಇತರ ನಾಯಕರೊಂದಿಗೆ ಅಮಿತ್ ಶಾ ನಿಂತಿರುವುದನ್ನು ಸಹ ನೋಡಬಹುದು.
ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ತನ್ನ 44 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಹಿಂದೆ ಭಾರತೀಯ ಜನಸಂಘ (BJS) ಎಂದು ಕರೆಯಲ್ಪಟ್ಟ ಕೇಸರಿ ಪಕ್ಷವು ಏಪ್ರಿಲ್ 6, 1980 ರಂದು ಸ್ಥಾಪನೆಯಾದಾಗಿನಿಂದ ಭಾರೀ ಬೆಳವಣಿಗೆಯನ್ನ ಕಂಡಿದೆ.