ಅನಂತ್ ಅಂಬಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಇವರ್ಯಾರು ಗೊತ್ತಾ ಎಂದ ನ್ಯೂಯಾರ್ಕ್ ಯುವತಿ; ನೆಟ್ಟಿಗರಿಂದ ತರಹೇವಾರಿ ಕಮೆಂಟ್….!

ಭಾರತದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಪ್ರಸ್ತುತ ಮದುವೆ ಸಂಭ್ರಮದಲ್ಲಿದ್ದಾರೆ. ಮಂಗಳವಾರದಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಇಟಲಿಯಲ್ಲಿ ನಡೆಯುತ್ತಿದ್ದು, ವಿಶ್ವದಾದ್ಯಂತದ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

ಇದಕ್ಕೂ ಮುನ್ನ ನ್ಯೂಯಾರ್ಕ್ ಗೆ ತೆರಳಿದ್ದ ಅನಂತ್ ಅಂಬಾನಿ ಅಲ್ಲಿನ ಬೀದಿ ಒಂದರಲ್ಲಿ ತಮ್ಮ ನಾಯಿ ಜೊತೆ ವಾಕ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅನಂತ್ ಅಂಬಾನಿ ಅವರನ್ನು ಗುರುತಿಸಿದ ಹಲವರು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದೇ ವೇಳೆ ನ್ಯೂಯಾರ್ಕ್ ನಿವಾಸಿಯಾದ ಬೆತ್ ಎಂಬ ಯುವತಿ, ಬಹುತೇಕರು ಅನಂತ್ ಅಂಬಾನಿ ಜೊತೆ ಫೋಟೋ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿ ತಾವು ಕೂಡ ಒಂದು ಫೋಟೋ ತೆಗೆದುಕೊಂಡಿದ್ದಾರೆ. ಆದರೆ ಆಕೆಗೆ ಅನಂತ್ ಅಂಬಾನಿ ಯಾರು ಎಂಬುದು ಗೊತ್ತಾಗಿಲ್ಲ. ಹೀಗಾಗಿ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಬೆತ್, ಇವರು ಯಾರು ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಗಳು ಬರುತ್ತಿವೆ.

ಇನ್ನು ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದು, ಇದಕ್ಕೂ ಮುನ್ನ ಅಂದರೆ ಮಾರ್ಚ್ 2024ರಲ್ಲಿ ಗುಜರಾತಿನ ಜಾಮ್ ನಗರದಲ್ಲಿ ಅದ್ದೂರಿಯಾಗಿ ವಿವಾಹ ಪೂರ್ವ ಕಾರ್ಯಕ್ರಮ ನಡೆದಿತ್ತು. ಇದೀಗ ಮತ್ತೊಂದು ವಿವಾಹ ಪೂರ್ವ ಕಾರ್ಯಕ್ರಮ ಮೇ 28 ರಿಂದ ಜೂನ್ 1 ರ ವರೆಗೆ ಇಟಲಿಯಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಐಷಾರಾಮಿ ಕ್ರೂಸ್ ಬುಕ್ ಮಾಡಲಾಗಿದೆ. ಇದರಲ್ಲಿ ಭಾಗವಹಿಸಲು ಬಾಲಿವುಡ್ ನಟರಾದ ಸಲ್ಮಾನ್ ಖಾನ್, ರಣಬೀರ್ ಕಪೂರ್, ರಣವೀರ್ ಸಿಂಗ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮೊದಲಾದವರು ಈಗಾಗಲೇ ತೆರಳಿದ್ದಾರೆ. ಇನ್ನುಳಿದಂತೆ ಅಮೀರ್ ಖಾನ್, ಶಾರುಖ್ ಖಾನ್ ಕೂಡ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read