ಸ್ವಂತ ವಾಹನ ಹೊಂದಿಲ್ಲದವರು ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡುವವರು, ಕಚೇರಿ ಸೇರಿದಂತೆ ಇತರೆಡೆಗೆ ಹೋಗುವವರು ಸಾಮಾನ್ಯವಾಗಿ ಕ್ಯಾಬ್, ಆಟೋ ಸೇವೆಯನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿಯೇ ಇರುವ ಹಲವು ಅಪ್ಲಿಕೇಷನ್ ಮೂಲಕ ತಾವು ಹೋಗಬೇಕಾದ ಸ್ಥಳವನ್ನು ಬುಕ್ ಮಾಡಿ ಪ್ರಯಾಣಿಸುತ್ತಾರೆ.
ಪ್ರಯಾಣಿಕರಿಗೆ ಇಂತಹ ಸೇವೆಯನ್ನು ಒದಗಿಸುತ್ತಿರುವ ಉಬರ್ ಇಡಿಯಾ 2023 ರಲ್ಲಿ ಯಾವ ನಗರದವರು ಹೆಚ್ಚು ಪ್ರಯಾಣ ಮಾಡಿದ್ದಾರೆಂಬ ವರದಿಯನ್ನು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ವಾಣಿಜ್ಯ ನಗರ ಮುಂಬೈ ಅಥವಾ ಕೇರಳ, ಬೆಂಗಳೂರಿನಲ್ಲಿ ಹೆಚ್ಚು ಮಂದಿ ಉಬರ್ ನಲ್ಲಿ ಪ್ರಯಾಣ ಮಾಡಿರಬಹುದೆಂದೇ ಊಹಿಸಲಾಗುತ್ತದೆ. ಆದರೆ ಆ ಊಹೆ ತಪ್ಪಾಗುತ್ತದೆ.
ಉಬರ್ ಇಂಡಿಯಾ ಬಿಡುಗಡೆ ಮಾಡಿರುವ ತನ್ನ ಇತ್ತೀಚಿನ ವರದಿಯಲ್ಲಿ ಗ್ರಾಹಕರು ತಮ್ಮ ಕ್ಯಾಬ್‌ಗಳನ್ನು ಬಳಸಿಕೊಂಡು ಈ ವರ್ಷ ಹೆಚ್ಚು ಪ್ರಯಾಣ ಮಾಡಿರುವ ನಗರ ದೆಹಲಿ ಎನ್ ಸಿ ಆರ್ ಎಂದು ಹೇಳಿದೆ. ಆದಾಗ್ಯೂ ಮುಂಬೈ ನಗರ ತಡರಾತ್ರಿಯಲ್ಲಿ ಅತಿ ಹೆಚ್ಚು ಸವಾರಿ ಮಾಡಿದೆ. ಅಂದರೆ ರಾತ್ರಿ ವೇಳೆ ಮುಂಬೈನಲ್ಲಿ ಹೆಚ್ಚು ಮಂದಿ ಉಬರ್ ಬುಕ್ ಮಾಡಿ ಪ್ರಯಾಣ ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಕಾಯ್ದಿರಿಸಿದ ಪ್ರವಾಸಗಳಿಗೆ ಸಂಬಂಧಿಸಿದಂತೆ ಮುಂಬೈ ನಗರವು ಅತ್ಯಧಿಕ ಅಂಕಗಳನ್ನು ಗಳಿಸಿದ್ದು ರಾಷ್ಟ್ರ ರಾಜಧಾನಿಯನ್ನು ಹಿಂದಿಕ್ಕಿದೆ ಎಂದು ವರದಿಯು ಸೂಚಿಸಿದೆ.
ಏತನ್ಮಧ್ಯೆ ಅಪ್ಲಿಕೇಶನ್‌ನ ಇಂಟರ್‌ಸಿಟಿ ಸೇವೆಯನ್ನು ಬಳಸಿಕೊಂಡು ಮುಂಬೈಕರ್‌ಗಳು ಹತ್ತಿರದ ಗಿರಿಧಾಮ ಲೋನಾವಾಲಾಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ ಎಂದು ಉಬರ್ ಉಲ್ಲೇಖಿಸಿದೆ. ಹಾಗಾಗಿ ಈ ಸ್ಥಳವನ್ನು ಮುಂಬೈನ “ಮೆಚ್ಚಿನ ವಾರಾಂತ್ಯದ ವಿಹಾರ ತಾಣ” ಎಂದು ಹೆಸರಿಸಿದೆ. ಮುಂಬೈನಿಂದ 2023 ರಲ್ಲಿ ಜನರು ಆರಿಸಿಕೊಂಡ ಇತರ ಇಂಟರ್ಸಿಟಿ ಮಾರ್ಗಗಳೆಂದರೆ ಪುಣೆ ಮತ್ತು ನಾಸಿಕ್.