ನವದೆಹಲಿ: ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬರುವ ಜೂನ್ 1 ರಿಂದ 6 ಅಂಕಿಗಳ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯ ಮಾಡಲಾಗಿದ್ದು, ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏಪ್ರಿಲ್ 1 ರಿಂದ ನಿಷೇಧಿಸಲಾಗಿದೆ.
4 ಅಂಕಿ ಮತ್ತು 6 ಅಂಕಿಗಳ ಹಾಲ್‌ಮಾರ್ಕಿಂಗ್ ಕುರಿತು ಗ್ರಾಹಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೈಕ್ರೋ ಸೇಲ್ ಘಟಕಗಳಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು 6 ಅಂಕಿಗಳ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 1ರಿಂದ HUID ಹೊಂದಿರುವ ಚಿನ್ನದ ಆಭರಣಗಳ ಮಾರಾಟವನ್ನು ಮಾತ್ರ ಅನುಮತಿಸಲಾಗುವುದು.
ಹೊಸ ನಿಯಮದ ಪ್ರಕಾರ, ಏಪ್ರಿಲ್ 1 ರಿಂದ, ಆರು ಅಂಕಿಗಳ ಆಲ್ಫಾನ್ಯೂಮರಿಕ್ ಹಾಲ್‌ಮಾರ್ಕಿಂಗ್ ಮಾತ್ರ ಮಾನ್ಯವಾಗಿರುತ್ತದೆ. ಹಾಲ್‌ಮಾರ್ಕಿಂಗ್ ಇಲ್ಲದ ಚಿನ್ನ ಮತ್ತು ಚಿನ್ನಾಭರಣಗಳನ್ನು ಮಾರಾಟ ಮಾಡುವಂತಿಲ್ಲ. ಅಲ್ಲದೆ, ಇನ್ಮುಂದೆ ನಾಲ್ಕು ಅಂಕಿಗಳ ಹಾಲ್‌ಮಾರ್ಕ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.