ಪೋಷಕರೇ ಗಮನಿಸಿ: ಮಕ್ಕಳ ಆಹಾರ ನೆಸ್ಲೆ ಸೆರಿಲ್ಯಾಕ್ ನಲ್ಲಿ ಭಾರಿ ಪ್ರಮಾಣದ ಸಕ್ಕರೆ ಬಳಕೆ

ನವದೆಹಲಿ: ಮಕ್ಕಳ ಆಹಾರ ಉತ್ಪನ್ನದ ಪ್ರಮುಖ ಜಾಗತಿಕ ಕಂಪನಿಯಾಗಿರುವ ಸ್ವಿಜರ್ಲೆಂಡ್ ಮೂಲದ ನೆಸ್ಲೆ ಭಾರತದಲ್ಲಿ ಮಾರಾಟ ಮಾಡುವ ಸೆರಿಲ್ಯಾಕ್ ಆಹಾರದಲ್ಲಿ ಭಾರಿ ಪ್ರಮಾಣದ ಸಕ್ಕರೆ ಬಳಸುತ್ತಿದೆ. ಯುರೋಪ್ ದೇಶಗಳಿಗೆ ಹೋಲಿಸಿದಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಸ್ವಿಜರ್ಲೆಂಡ್ ಮೂಲದ ಪಬ್ಲಿಕ್ ಐ ಅಂಡ್ ಇಂಟರ್ನ್ಯಾಷನಲ್ ಬೇಬಿ ಫುಡ್ ಆಕ್ಷನ್ ನೆಟ್ವರ್ಕ್ ಎಂಬ ಸರ್ಕಾರೇತರ ಸಂಸ್ಥೆ ವಿವಿಧ ದೇಶಗಳಲ್ಲಿ ಸೆರಿಲ್ಯಾಕ್ಸ್ ಸೇರಿ 150 ಮಕ್ಕಳು ಬಳಸುವ ಆಹಾರ ಉತ್ಪನ್ನ ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜರ್ಮನಿ, ಬ್ರಿಟನ್ ನಲ್ಲಿ ಮಾಡಲಾಗುವ ಗೋಧಿಯಿಂದ ತಯಾರಿಸಿದ ಸೆರಿಲ್ಯಾಕ್ ನಲ್ಲಿ ಯಾವುದೇ ಸಕ್ಕರೆ ಅಂಶಗಳು ಇಲ್ಲ. ಆದರೆ, ಭಾರತದಲ್ಲಿ ಪ್ರತಿ ಒಂದು ಬಾರಿ ಬಳಕೆಗೆ ಶಿಫಾರಸು ಮಾಡಲಾದ ಆಹಾರದಲ್ಲಿ, 2.7 ಗ್ರಾಂ ನಷ್ಟು ಸಕ್ಕರೆ ಪತ್ತೆಯಾಗಿದೆ. ಇದನ್ನು ಕಂಪನಿ ತನ್ನ ಉತ್ಪನ್ನಗಳ ಮೇಲೆಯೂ ನಮೂದಿಸಿದ್ದು, ಇದು ಅಂತರರಾಷ್ಟ್ರೀಯ ಮಾರ್ಗಸೂಚಿ ಪ್ರಮಾಣಕ್ಕಿಂತ ಭಾರಿ ಅಧಿಕವಾಗಿದೆ. ಅಧಿಕ ಸಕ್ಕರೆ ಅಂಶ ಹೊಂದಿದ ಆಹಾರ ಉತ್ಪನ್ನಗಳನ್ನು ನೆಸ್ಲೆ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾ, ಆಫ್ರಿಕಾದ ಹಲವು ಬಡ ದೇಶಗಳಲ್ಲಿಯೂ ಮಾರಾಟ ಮಾಡುತ್ತಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read