ಬೆಂಗಳೂರು : ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರಿನ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಇಂಟರ್ನೆಟ್ ಕಂಪನಿಯ MD ಫಣೀಂದ್ರ ಹಾಗೂ CEO ವಿನಯ್ ಕುಮಾರ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಕಂಪನಿ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡಿದ ಫೆಲಿಕ್ಸ್ ಈ ಕೃತ್ಯ ಎಸಗಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಆರೋಪಿಗಳು 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬಂದ್ರೆ ಕತ್ತು ಕುಯ್ದುಕೊಂಡು ಸಾಯ್ತೀನಿ : ಮೃತ ವೇಣುಗೋಪಾಲ್ ಪತ್ನಿ ಎಚ್ಚರಿಕೆ
ಆರೋಪಿಗಳು 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬಂದ್ರೆ ಕತ್ತು ಕುಯ್ದುಕೊಂಡು ಸಾಯ್ತೀನಿ ಎಂದು ಮೃತ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಪತ್ನಿ ಎಚ್ಚರಿಕೆ ನೀಡಿದ್ದಾರೆ.
ಮೃತ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಿವಾಸಕ್ಕೆ ಇಂದು ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಭೇಟಿ ಮಾಡಿ ವೇಣುಗೋಪಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಅವರ ಮುಂದೆ ಅಳಲು ತೋಡಿಕೊಂಡ ಮೃತ ವೇಣುಗೋಪಾಲ್ ಪತ್ನಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಮೂರೇ ತಿಂಗಳಿಗೆ ಆರೋಪಿಗಳು ಹೊರಗೆ ಬಂದ್ರೆ ನಾನು ಮತ್ತು ಮಗಳು ಕತ್ತು ಕೊಯ್ದುಕೊಂಡು ಸಾಯುತ್ತೇವೆ. ಈಗ ನನಗೆ ಯಾರು ಗತಿ ಎಂದು ಅಳಲು ತೋಡಿಕೊಂಡಿದ್ದಾಳೆ. ಇದೇ ವೇಳೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ ಸುನೀಲ್ ಬೋಸ್ ‘ ಜಿಲ್ಲಾಧಿಕಾರಿಗಳು ನನಗೆ ಎಲ್ಲಾ ಹೇಳಿದ್ದಾರೆ. ನನ್ನ ತಂದೆಯವರುಗೆ ಹೇಳಿ ಗರಿಷ್ಠ ಪರಿಹಾರ ಸಿಗುವಂತೆ ಮಾಡುತ್ತೇನೆ ಎಂದು ವೇಣುಗೋಪಾಲ್ ಪತ್ನಿಗೆ ಸುನೀಲ್ ಬೋಸ್ ಭರವಸೆ ನೀಡಿದರು.