
ಮಂಡ್ಯ: ವರ್ಷದ ಹಿಂದೆ ಬೆಂಗಳೂರಿನಲ್ಲಿ 14 ವರ್ಷದ ಅಪ್ರಾಪ್ತೆ ಪುಸಲಾಯಿಸಿ ಮದುವೆಯಾಗಿದ್ದ ಯುವಕನನ್ನು ಮಂಡ್ಯ ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕು ಬಿದರಹಳ್ಳಿ ಹುಂಡಿ ಗ್ರಾಮದ ಯುವಕನನ್ನು ಬಂಧಿಸಲಾಗಿದೆ. ಮಗ ಮತ್ತು ಸೊಸೆ ಕಿರುಕುಳ ನೀಡುತ್ತಿದ್ದಾರೆ ಎಂದು ಯುವಕನ ತಾಯಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ್ದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿದ್ದ ಯುವಕ, ಬಾಲಕಿ ಪ್ರೀತಿಸಿದ್ದು, ಅಪ್ರಾಪ್ತೆಯಾಗಿದ್ದರೂ ಆಕೆಯನ್ನು ಪುಸಲಾಯಿಸಿ ಮದುವೆಯಾಗಿ ಗ್ರಾಮಕ್ಕೆ ಬಂದು ಸಂಸಾರ ನಡೆಸುತ್ತಿದ್ದ. ಮಗ, ಸೊಸೆ ಕಿರುಕುಳ ನೀಡುತ್ತಿರುವ ಬಗ್ಗೆ ತಾಯಿ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಬಾಲಕಿ ಮೇಲೆ ಅನುಮಾನ ಬಂದು ವಯಸ್ಸಿನ ದಾಖಲೆ ಕೇಳಿ ಪರೀಕ್ಷೆಗೆ ಒಳಪಡಿಸಿದಾಗ ಅಪ್ರಾಪ್ತೆ ಎನ್ನುವುದು ಗೊತ್ತಾಗಿದೆ. ಪೋಕ್ಸೋ ಕಾಯ್ದೆಯಡಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.