ಫೋಟೋ ತೆಗೆಯುವುದು, ತೆಗೆಸಿಕೊಳ್ಳುವುದು ಇಂದಿನ ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಫೋನ್‌ಗಳು ತಮ್ಮ ಸುಧಾರಿತ ಇನ್-ಬಿಲ್ಟ್ ಕ್ಯಾಮೆರಾಗಳನ್ನು ಬಳಸಿಕೊಂಡು ನಂಬಲಾಗದ ಚಿತ್ರಗಳನ್ನು ಸೆರೆಹಿಡಿಯುವ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದಾಗ್ಯೂ, ಛಾಯಾಚಿತ್ರವನ್ನು ಕ್ಲಿಕ್ ಮಾಡುವ ಮೊದಲು ಬೆಳಕಿಗೆ ವಿಶೇಷ ಪ್ರಾಧಾನ್ಯತೆ ಇದೆ. ಕ್ಯಾಮೆರಾದ ಸೆರೆಹಿಡಿಯುವಿಕೆಯಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ. ಅದು ಹೇಗೆ ಎಂಬ ವಿಡಿಯೋ ಒಂದು ವೈರಲ್ ಆಗಿದೆ.
10-ಸೆಕೆಂಡಿನ ವಿಡಿಯೋದಲ್ಲಿ ಬೆಳಕಿನ ಪ್ರಮಾಣವು ಕ್ಯಾಮೆರಾದ ಕ್ಯಾಪ್ಚರ್ ದರದ ವ್ಯಾಪ್ತಿಯನ್ನು ಹೇಗೆ ನಿರ್ಧರಿಸುತ್ತದೆ ಎಂಬುದನ್ನು ತೋರಿಸುತ್ತದೆ.
ಟ್ವಿಟರ್‌ನಲ್ಲಿ ಸೈನ್ಸ್ ಈಸ್ ಅಮೇಜಿಂಗ್ ಈ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, ವಸ್ತುವನ್ನು ಕಡಿಮೆ ಅಥವಾ ಬೆಳಕು ಇಲ್ಲದ ಪ್ರದೇಶದಿಂದ ಹೆಚ್ಚು ಬೆಳಕು ಇರುವ ಪ್ರದೇಶಕ್ಕೆ ಸ್ಥಳಾಂತರಿಸಿದಾಗ ಚಲನೆಯು ಹೇಗೆ ಬದಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.
ಕ್ಯಾಮೆರಾದಲ್ಲಿ ಬಳಸಿದ ಬೆಳಕಿನ ಅಂಶವನ್ನು ಎತ್ತಿ ತೋರಿಸಲು ಅದು ಬಾಗಿದ ಮತ್ತು ಅದರ ಸ್ಥಳಕ್ಕೆ ಹಿಂತಿರುಗುವ ವೇಗವನ್ನು ತೋರಿಸಲು ಮಾಪಕವನ್ನು ಬಳಸಲಾಗಿದೆ. ಈ ವಿಡಿಯೋ ಕ್ಯಾಮೆರಾ ಪ್ರಿಯರನ್ನು ಸೆಳೆಯುತ್ತಿದೆ. ಇಷ್ಟೊಂದು ದೊಡ್ಡ ತಂತ್ರವನ್ನು ಸುಲಭದಲ್ಲಿ ವಿವರಿಸಿರುವ ಕುರಿತು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.