alex Certify UPSC ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದರು ಈ ʼಸುಂದರಿʼ; ಇಲ್ಲಿದೆ ಯಶಸ್ಸಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UPSC ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದರು ಈ ʼಸುಂದರಿʼ; ಇಲ್ಲಿದೆ ಯಶಸ್ಸಿನ ಕಥೆ

UPSC ಪರೀಕ್ಷೆಯಲ್ಲಿ ಮೊದಲ ಬಾರಿಗೇನೇ ಯಶಸ್ಸು ಕಂಡ ಪ್ರತಿಭಾವಂತೆ ಐಶ್ವರ್ಯಾ ಶೆರೋನ್ ಅವರ ಬಗ್ಗೆ ತಿಳಿಯಬೇಕಾದ ಸಾಕಷ್ಟು ವಿಷಯಗಳಿವೆ.

ಐಶ್ವರ್ಯಾ ಶೆರೋನ್ ‌ʼಫೆಮಿನಾ ಮಿಸ್ ಇಂಡಿಯಾ 2016ʼ ರ ಫೈನಲಿಸ್ಟ್ ಆಗಿದ್ದರು. ಐಶ್ವರ್ಯಾ ಶೆರೋನ್ ಅವರು ಸೌಂದರ್ಯ ಸ್ಪರ್ಧೆಯಿಂದ ಹಿಡಿದು ಐಎಫ್‌ಎಸ್ ಅಧಿಕಾರಿಯವರೆಗಿನ ಅವರ ಅದ್ಭುತ ಪ್ರಯಾಣದ ಕುರಿತು ಆಸಕ್ತಿಕರ ಮಾಹಿತಿ ಇಲ್ಲಿದೆ.

ಐಶ್ವರ್ಯಾ ಶೆರೋನ್ ತನ್ನ ಮೊದಲ ಪ್ರಯತ್ನದಲ್ಲಿ ಯಾವುದೇ ಕೋಚಿಂಗ್ ತರಗತಿಗೆ ಹಾಜರಾಗದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. UPSC ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸುವ ಮುನ್ನ ಐಶ್ವರ್ಯಾ ಶೆರೋನ್ ಮಾಡೆಲ್ ಆಗಿದ್ದರು. ಅವರು 2018 ರಲ್ಲಿ ತಯಾರಿ ಆರಂಭಿಸಿ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದರು.

2016 ರಲ್ಲಿ, ಐಶ್ವರ್ಯಾ ಶೆರೋನ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದರು. 2015 ರಲ್ಲಿ ಅವರು ʼಮಿಸ್ ದೆಹಲಿʼ ಕಿರೀಟವನ್ನು ಗೆದ್ದರು ಮತ್ತು 2014 ರಲ್ಲಿ ಅವರು ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ಎಂಬ ಪ್ರಶಸ್ತಿ ಪಡೆದರು.

ಐಶ್ವರ್ಯಾ ಶೆರೋನ್ ದೆಹಲಿಯ ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಐಶ್ವರ್ಯಾ 12 ನೇ ತರಗತಿಯಲ್ಲಿ 97.5% ಅಂಕಗಳನ್ನು ಗಳಿಸಿದ್ದರು ಮತ್ತು ಶಾಲೆಯಲ್ಲಿ ಟಾಪರ್ ಆಗಿದ್ದರು.

ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆದಿದ್ದಾರೆ. ಐಶ್ವರ್ಯಾ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ಸಹ ಬಯಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...