ನವದೆಹಲಿ: ಬುಧವಾರ ಬೆಳಗ್ಗೆ ಲೋಕಸಭೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಸಂಸತ್ ನಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕಾಂಗ್ರೆಸ್ ಪಕ್ಷದ ಸಂಸದರಿಗೆ ವಿಪ್ ಜಾರಿಗೊಳಿಸಲಾಗಿದೆ.
ಜೂನ್ 26ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಹು ಮುಖ್ಯವಾದ ವಿಷಯ ಕೈಗೆತ್ತಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಸಂಸದರು ಬೆಳಗ್ಗೆ 11 ಗಂಟೆಯಿಂದ ಲೋಕಸಭೆ ಕಲಾಪ ಮುಂದೂಡುವವರೆಗೆ ತಪ್ಪದೇ ಹಾಜರಿದ್ದು, ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ಹೇಳಲಾಗಿದೆ.
ಪಕ್ಷದ ಮುಖ್ಯ ಸಚೇತಕ ಕೆ. ಸುರೇಶ್ ಅವರು ವಿಪ್ ಜಾರಿ ಮಾಡಿದ್ದಾರೆ. ಸುರೇಶ್ ಅವರು ಸ್ಪೀಕರ್ ಹುದ್ದೆಗಾಗಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದು, ಎನ್.ಡಿ.ಎ. ಮೈತ್ರಿಕೂಟದ ಓಂ ಬಿರ್ಲಾ ವಿರುದ್ಧ ಸ್ಪರ್ಧಿಸಿದ್ದಾರೆ. ಇಂದು ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ.