ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ಪ್ರಸಕ್ತ ವರ್ಷದಲ್ಲಿ ನಿಗಮದಿಂದ ಸಮವಸ್ತ್ರ ನೀಡುವ ಬದಲು ಸಮವಸ್ತ್ರ ಖರೀದಿಗೆ ನಗದು ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಪ್ರತಿವರ್ಷ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ನಿಗಮದಿಂದಲೇ ಸಮವಸ್ತ್ರ ನೀಡಲಾಗುತ್ತಿತ್ತು. ಈ ಬಾರಿ ಸಮವಸ್ತ್ರ ನೀಡುವ ಬದಲು ಸಮವಸ್ತ್ರ ಖರೀದಿಗೆ ಹಣ ನೀಡಲಾಗುವುದು. ಎರಡು ಶರ್ಟು ಮತ್ತು ಪ್ಯಾಂಟ್ ಬಟ್ಟೆ ಖರೀದಿಗೆ ಪ್ರತಿ ಸಿಬ್ಬಂದಿಗೆ 731 ರಿಂದ 742 ರೂ., ಎರಡು ಸೀರೆ ಮತ್ತು ರವಿಕೆಗೆ 1700 ರೂ. ನೀಡಲು ನಿರ್ಧರಿಸಲಾಗಿದೆ. ಈ ಸಮವಸ್ತ್ರ ಹೊಲಿಸಿಕೊಳ್ಳಲು ಪ್ರತಿ ಸಿಬ್ಬಂದಿಗೆ 350 ರೂಪಾಯಿ ನೀಡಲು ನಿರ್ಧರಿಸಿ ಆದೇಶಿಸಲಾಗಿದೆ.
ಸಮವಸ್ತ್ರದ ಬಟ್ಟೆ ಖರೀದಿ ಮತ್ತು ಹೊಲಿಗೆ ವೆಚ್ಚ ಬಹಳ ಕಡಿಮೆಯಾಗಿದ್ದು, ಇದನ್ನು ಹೆಚ್ಚಳ ಮಾಡುವಂತೆ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮನವಿ ಮಾಡಿದ್ದಾರೆ.