ಫೆ. 4 ರಂದು 1008 ಮಠಾಧೀಶರ ಪಾದಪೂಜೆ ಮೂಲಕ ‘ಕ್ರಾಂತಿವೀರ ಬ್ರಿಗೇಡ್’ ಗೆ ಚಾಲನೆ

ಹುಬ್ಬಳ್ಳಿ: ಹಿಂದೂಗಳ ರಕ್ಷಣೆ ಮತ್ತು ಮಠಮಾನ್ಯಗಳ ಹಿತಕಾಯಲು ರಾಜ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಬ್ರಿಗೇಡ್ ಅಧ್ಯಕ್ಷರಾಗಿರುವ ವಿಜಯಪುರ ಜಿಲ್ಲೆ ಮಖಣಪುರದ ಶ್ರೀ ಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ವಿವಿಧ ಮಠಾಧೀಶರೇ ಸೇರಿಕೊಂಡು ಆರಂಭಿಸಿರುವ ಸಂಘಟನೆ ಇದಾಗಿದೆ. ಫೆಬ್ರವರಿ 4ರಂದು ಬಸವನ ಬಾಗೇವಾಡಿಯಲ್ಲಿ 1008 ಮಠಾಧೀಶರ ಪಾದಪೂಜೆ ನೆರವೇರಿಸುವ ಮೂಲಕ ಬ್ರಿಗೇಡ್ ಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನಾಡಿನ ವಿವಿಧ ಸಮಾಜದ 100 ಮಠಾಧೀಶರು ಸದಸ್ಯರಾಗಿದ್ದಾರೆ. ಇವರಲ್ಲಿ 25 ಸ್ವಾಮೀಜಿಗಳ ನೇತೃತ್ವದಲ್ಲಿ ಬ್ರಿಗೇಡ್ ರೂಪಿಸಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ. ಹಿಂದುತ್ವಕ್ಕೆ ಧಕ್ಕೆ ಬಂದಾಗ ಬ್ರಿಗೇಡ್ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read