ಸರಸ್ವತಿಗೆ ಸಂಬಂಧಿಸಿದ ಈ ವಸ್ತು ಮನೆಯಲ್ಲಿಟ್ಟು ಚಮತ್ಕಾರ ನೋಡಿ……..!

ಪ್ರತಿಯೊಬ್ಬ ವ್ಯಕ್ತಿ ದಿನಪೂರ್ತಿ ಕೆಲಸ ಮಾಡಿದ್ರೂ ಯಶಸ್ಸು ಸಿಗೋದು ಕಷ್ಟ. ಕೆಲವರ ಕೈ ತುಂಬಾ ಹಣವಿದ್ರೆ ಮತ್ತೆ ಕೆಲವರ ಕೈನಲ್ಲಿ ಬಿಡಿಕಾಸು ಇರೋದಿಲ್ಲ. ಆರ್ಥಿಕ ದುಸ್ಥಿತಿಗೆ ವಾಸ್ತುದೋಷ ಕೂಡ ಕಾರಣವಾಗುತ್ತದೆ. ವಾಸ್ತು ದೋಷವಿದೆ ಎಂಬ ಕಾರಣಕ್ಕೆ ಮನೆಯನ್ನು ಕೆಡವಿ ಕಟ್ಟಲು ಸಾಧ್ಯವಿಲ್ಲ. ಮಾತೆ ಸರಸ್ವತಿಗೆ ಸಂಬಂಧಿಸಿದ ಕೆಲವೊಂದು ವಸ್ತುಗಳು ಅಥವಾ ಒಂದು ವಸ್ತು ಮನೆಯಲ್ಲಿದ್ದರೆ ಸಾಕು. ವಾಸ್ತುದೋಷ ನಿವಾರಣೆಯಾಗುತ್ತದೆ.

ವೀಣೆ: ಮಾತೆ ಸರಸ್ವತಿಯ ಅತ್ಯಂತ ಪ್ರೀತಿಯ ವಸ್ತುಗಳಲ್ಲಿ ವೀಣೆ ಒಂದು. ವೀಣೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ವೀಣೆಯಿದ್ರೆ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ವೀಣೆಯಿಂದ ಬರುವ ಶಬ್ಧ ಪರಿಸರವನ್ನು ಶುದ್ಧ ಹಾಗೂ ಶಕ್ತಿಯುತ ಮಾಡುತ್ತದೆ.

ಹಂಸ: ಸರಸ್ವತಿ ವಾಹನ ಹಂಸ. ಮನೆಯಲ್ಲಿ ಹಂಸದ ಚಿತ್ರ ಅಥವಾ ಶೋ ಪೀಸ್ ಇಡಿ. ಹಂಸದ ಚಿತ್ರವನ್ನು ಮನೆಯ ಸದಸ್ಯರ ಕಣ್ಣಿಗೆ ಬೀಳುವ ಜಾಗದಲ್ಲಿಡಿ. ಇದು ಮನೆಯ ಶಾಂತಿ-ನೆಮ್ಮದಿಗೆ ಕಾರಣವಾಗುತ್ತದೆ.

ನವಿಲುಗರಿ: ಅನೇಕ ದೇವಾನುದೇವತೆಗಳಿಗೆ ಸಂಬಂಧಿಸಿದ ವಸ್ತು ನವಿಲುಗರಿ. ಮನೆಯಲ್ಲಿ ನವಿಲುಗರಿ ಇಡುವುದು ಶುಭಕರ. ದೇವರ ಮನೆ ಹಾಗೂ ಮಕ್ಕಳ ರೂಮಿನಲ್ಲಿ ನವಿಲುಗರಿಯಿಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ.

ಕಮಲದ ಹೂವು: ದೇವರ ಪೂಜೆಗೆ ಎಲ್ಲ ಹೂವುಗಳ ಜೊತೆ ಕಮಲದ ಹೂವನ್ನು ಬಳಸಬೇಕು. ಪ್ರತಿ ದಿನ ಹಳೆಯ ಹೂವನ್ನು ತೆಗೆದು ಹೊಸ ಹೂವನ್ನು ಬಳಸಬೇಕು. ಕಮಲದ ಹೂವು ಮನೆಯ ಸುಖ-ಸಮೃದ್ಧಿಗೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read