ವೈಭವ್ ಮಹದೇವ್ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ಬಹುನಿರೀಕ್ಷಿತ ‘ಜೂನಿ’ ಚಿತ್ರದ ”ಗೂಡಿಂದ” ಎಂಬ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ರಮ್ಯಾ ಭಟ್ ಅಭ್ಯಂಕರ್ ಧ್ವನಿಯಾಗಿದ್ದು, ನಕುಲ್ ಅಭ್ಯಂಕರ್ ಅವರ ಸಂಗೀತ ಮತ್ತು ಉಮೇಶ್ ಸಾಹಿತ್ಯವಿದೆ.
ಈ ಚಿತ್ರವನ್ನು ತ್ರಿಶೂಲ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಮೋಹನ್ ಕುಮಾರ್ ನಿರ್ಮಾಣ ಮಾಡಿದ್ದು, ಪೃಥ್ವಿ ಅಂಬಾರ್ ಸೇರಿದಂತೆ ರಿಷಿಕ ನಾಯಕ್, ಧನುಷ್, ರವೀಂದ್ರ, ಅವಿನಾಶ್, ವಿನಯ ಪ್ರಸಾದ್, ಮತ್ತು ಸುಧಾರಾಣಿ ತೆರೆ ಹಂಚಿಕೊಂಡಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನ, ಜಿತಿನ್ ದಾಸ್ ಛಾಯಾಗ್ರಹಣ, ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನವಿದೆ. ನಾಗಭೂಷಣ್ ದೇಶಪಾಂಡೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.