ಐಸ್ ಕ್ರೀಂ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತೆ. ಐಸ್ ಕ್ರೀಂ ಬೇಡ ಅಂತಾ ಯಾರೂ ಹೇಳುವುದಿಲ್ಲ. ಯಾವ ಸಮಯದಲ್ಲಾದ್ರೂ ಸರಿ ಐಸ್ ಕ್ರೀಂ ಸವಿಯೋಕೆ ಎಲ್ಲರೂ ರೆಡಿ. ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಐಸ್ ಕ್ರೀಂ ತಿನ್ನೋದು ಬೆಸ್ಟ್ ಅಂತಾರೆ ವಿಜ್ಞಾನಿಗಳು.
ಹೀಗೆ ಮಾಡೋದ್ರಿಂದ ನಮ್ಮಲ್ಲಿ ಚುರುಕುತನ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ದಿನಪೂರ್ತಿ ಉತ್ಸಾಹದಿಂದ ಕೆಲಸ ಮಾಡಬಹುದು. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಐಸ್ ಕ್ರೀಂ ತಿನ್ನಿಸಿ ನಂತರ ಅವರಿಗೆಲ್ಲ ಒಗಟು ಬಿಡಿಸುವಂತೆ ಸೂಚಿಸಲಾಯ್ತು.
ಯಾರ್ಯಾರು ಬೆಳಗ್ಗೆ ಐಸ್ ಕ್ರೀಂ ತಿಂದಿದ್ದಾರೋ ಅವರೆಲ್ಲ ತುಂಬಾ ಅಲರ್ಟ್ ಆಗಿ ಬುದ್ಧಿವಂತಿಕೆಯಿಂದ ಒಗಟಿಗೆ ಉತ್ತರ ಹೇಳಿದ್ದಾರೆ. ಅವರಲ್ಲಿ ಮಾನಸಿಕ ಕಿರಿಕಿರಿ ಕೂಡ ಇರಲಿಲ್ಲ. ಐಸ್ ಕ್ರೀಂ ಯಾರು ತಿಂದಿರಲಿಲ್ವೋ ಅವರಲ್ಲಿ ಈ ಪ್ರಮಾಣದ ಚುರುಕುತನ ಇರಲಿಲ್ಲ. ಆದ್ರೆ ನ್ಯೂಟ್ರಿಶಿಯನ್ ಗಳು ಮಾತ್ರ ಬೆಳ್ಳಂಬೆಳಗ್ಗೆ ಜಾಸ್ತಿ ಕ್ಯಾಲೋರಿ ಇರೋ ಐಸ್ ಕ್ರೀಂ ತಿನ್ನಬೇಡಿ, ಹಣ್ಣು, ಕಡಿಮೆ ಕ್ಯಾಲೋರಿ ಇರೋ ತಿನಿಸನ್ನು ಸೇವಿಸಿ ಎನ್ನುತ್ತಾರೆ.