ಉಳಿತಾಯ, ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯಗತ್ಯ. ಹೂಡಿಕೆ ವಿಷ್ಯದಲ್ಲಿ ಮಹಿಳೆಯರು ಹಿಂದಿದ್ದಾರೆ. ಬಂಗಾರ ಖರೀದಿ ಬಿಟ್ಟರೆ ಉಳಿತಾಯ ಖಾತೆಯಲ್ಲಿ, ಷೇರು ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಸುಸಂದರ್ಭದಲ್ಲಿ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಹೂಡಿಕೆ ಬಗ್ಗೆ ತಿಳಿಯುವ ಅಗತ್ಯವಿದೆ.
- ಸಾರ್ವಜನಿಕ ಭವಿಷ್ಯ ನಿಧಿ : ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಯಾಗಿದೆ. 15 ವರ್ಷಗಳವರೆಗೆ ವಾರ್ಷಿಕ 50 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಶೇಕಡಾ 7.1ರ ದರದಲ್ಲಿ ಬಡ್ಡಿ ಸಿಗ್ತಿದೆ.
- ರಾಷ್ಟ್ರೀಯ ಪಿಂಚಣಿ ಯೋಜನೆ : ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲೂ ಮಹಿಳೆಯರು ಹೂಡಿಕೆ ಮಾಡಬಹುದು. ಇದು ಭದ್ರ ಹಾಗೂ ಉತ್ತಮ ಹೂಡಿಕೆ ಯೋಜನೆಯಾಗಿದೆ.
- ಮ್ಯೂಚುವಲ್ ಫಂಡ್ : ಮ್ಯೂಚುವಲ್ ಫಂಡ್‌ಗಳು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ಮಹಿಳೆಯರು ಈಕ್ವಿಟಿ, ಸಾಲ ಅಥವಾ ಮ್ಯೂಚುವಲ್ ಫಂಡ್‌ಗಳ ಹೈಬ್ರಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
- ಜೀವ ವಿಮಾ ಪಾಲಿಸಿ : ಭಾರತೀಯ ಜೀವ ವಿಮಾ ನಿಗಮವು ಮಹಿಳೆಯರ ಅಗತ್ಯಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಅನೇಕ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಮಹಿಳೆಯರು ತಮ್ಮ ಭವಿಷ್ಯ ಭದ್ರಗೊಳಿಸಲು ಇದ್ರಲ್ಲಿ ಹಣ ಹೂಡಿಕೆ ಮಾಡಬಹುದು.
- ಆರೋಗ್ಯ ವಿಮೆ : ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆ ಅತ್ಯಗತ್ಯವಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಹಿಳೆಯರು ಆರೋಗ್ಯ ವಿಮೆಯನ್ನು ಖರೀದಿಸುವ ಮೂಲಕ ವೈದ್ಯಕೀಯ ಚಿಕಿತ್ಸಾ ಹಣದ ಚಿಂತೆಯಿಂದ ಮುಕ್ತವಾಗಬಹುದು.
- ಸ್ಥಿರ ಠೇವಣಿ ಯೋಜನೆ : ಅನೇಕ ಬ್ಯಾಂಕ್ ಗಳು ಸ್ಥಿರ ಠೇವಣಿ ಯೋಜನೆಯನ್ನು ಹೊಂದಿವೆ. ಉತ್ತಮ ಬಡ್ಡಿ ನೀಡುವ ಹಾಗೂ ಭದ್ರತೆಯುಳ್ಳ ಬ್ಯಾಂಕ್ ನಲ್ಲಿ ಮಹಿಳೆಯರು ಸ್ಥಿರ ಠೇವಣಿ ಮಾಡಿ ಲಾಭಗಳಿಸಬಹುದು.