ಯುವಕನೊಬ್ಬ ತನ್ನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.ಒಡಿಶಾದ ಕಿಯೋಂಜಾರ್ ಜಿಲ್ಲೆಯ ಸರಸಪಸಿ ಗ್ರಾಮದ ವೃದ್ಧ ಮಹಿಳೆ ಏಕಾಂಗಿಯಾಗಿ ವಾಸಿಸುತ್ತಿದ್ದರು. ಆ ವಯಸ್ಸಿನಲ್ಲಿ ಅವಳು ತನ್ನ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯಬೇಕಿತ್ತು, ಆದರೆ ಆಕೆ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಸರ್ಕಾರ ನೀಡುವ ಪಡಿತರ ಮತ್ತು ಪಿಂಚಣಿಯೊಂದಿಗೆ ಆಕೆ ಏಕಾಂಗಿ ಜೀವನವನ್ನು ನಡೆಸುತ್ತಿದ್ದರು.
ಆದರೆ ಅವಳು ಒಂದು ದಿನ ತನ್ನ ಕಿರಿಯ ಮಗನ ಜಮೀನಿಗೆ ಹೋಗಿ ಹೂಕೋಸನ್ನು ಕತ್ತರಿಸಿದ್ದಾಳೆ. ಇಷ್ಟಕ್ಕೆ ರೊಚ್ಚಿಗೆದ್ದ ಮಗ..ನನ್ನ ಅನುಮತಿ ಇಲ್ಲದೇ ಹೂ ಕೂಸು ಕಿತ್ತಿದ್ದೀಯಾ ಎಂದು ಗಲಾಟೆ ಮಾಡಿ ತಾಯಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ.
ಡಿಸೆಂಬರ್ 20ರಂದು ಆಕೆ ತಮ್ಮ ಮಗನ ಹೊಲದಲ್ಲಿ ಹೂಕೋಸು ಕಿತ್ತಿದ್ದಾಳೆ. ನಂತರ ಅದನ್ನು ಬೇರೆಯವರಿಗೆ ಮಾರಾಟ ಮಾಡಿ 80 ರೂ ಪಡೆದಿದ್ದಾಳೆ. ಕಷ್ಟದ ಜೀವನ ನಡೆಸುತ್ತಿದ್ದ ತಾಯಿ ತುತ್ತು ಅನ್ನಕ್ಕೋಸ್ಕರ ಈ ಕೆಲಸ ಮಾಡಿದ್ದಾಳೆ. ಈ ವಿಚಾರ ತಿಳಿದು ಗರಂ ಆದ ಮಗ ತಾಯಿಯನ್ನು ತೀವ್ರವಾಗಿ ಥಳಿಸಿ ಗ್ರಾಮದ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಗ್ಗ ಮತ್ತು ದೊಣ್ಣೆಗಳಿಂದ ತೀವ್ರವಾಗಿ ಥಳಿಸಿದ್ದಾನೆ. ನಂತರ ಆಕೆಯ ಸಹಾಯಕ್ಕೆ ಬಂದ ಸ್ಥಳೀಯರು ತಾಯಿಯನ್ನು ರಕ್ಷಿಸಿದ್ದಾರೆ.
ವೃದ್ಧ ಮಹಿಳೆಯನ್ನು ಉಳಿಸಲು ಪ್ರಯತ್ನಿಸಿದ ಸ್ಥಳೀಯರಿಗೆ ಆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಆದರೆ, ಸ್ಥಳೀಯರು ಆಕೆಯನ್ನು ಜೀವಂತವಾಗಿ ರಕ್ಷಿಸಿದ್ದಾರೆ. ನಂತರ ಸಂತ್ರಸ್ತೆಯನ್ನು ಬಸುದೇವಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧಾಪ್ಯದಲ್ಲಿ ತಾಯಿಯನ್ನು ಪೋಷಿಸಬೇಕಾದ ಗಂಡುಮಕ್ಕಳು ಅವಳನ್ನು ಮನೆಯಿಂದ ಹೊರಹಾಕಿ ಇಂತಹ ಅಮಾನವೀಯ ಕೃತ್ಯ ಎಸಗುತ್ತಾರೆ ಅಂದರೆ ನಿಜಕ್ಕೂ ಬಹಳ ಬೇಸರದ ಸಂಗತಿ. ಜಗತ್ತಿನಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ…!