ಕ್ಯಾಂಪಸ್‌ ನೇಮಕಾತಿಯಲ್ಲಿ ಬರೋಬ್ಬರಿ 64.61 ಲಕ್ಷ ರೂ. ಪ್ಯಾಕೇಜ್ ಪಡೆದ ಐಐಎಂ ವಿದ್ಯಾರ್ಥಿನಿ

ಯಾವುದೇ ವಿದ್ಯಾರ್ಥಿಗೂ ಕಾಲೇಜಿನಲ್ಲಿ ಕ್ಯಾಂಪಸ್‌ ನೇಮಕಾತಿಯಲ್ಲಿ ಒಂದೊಳ್ಳೆ ಉದ್ಯೋಗ ಪಡೆಯುವುದು ಎಂದರೆ ಜೀವನ ಬದಲಿಸುವ ವಿಷಯವಾಗಿರುತ್ತದೆ.

ಸಂಭಾಲ್ಪುರದ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಘಟಕದ ವಿದ್ಯಾರ್ಥಿನಿ ಅವ್ನಿ ಮಲ್ಹೋತ್ರಾಗೆ ಮೈಕ್ರೋಸಾಫ್ಟ್‌ ಸಂಸ್ಥೆಯು ವಾರ್ಷಿಕ 64.61 ಲಕ್ಷ ರೂ.ಗಳ ಪ್ಯಾಕೇಜ್‌ ಕೊಟ್ಟು ಕೆಲಸಕ್ಕೆ ತೆಗೆದುಕೊಂಡಿದೆ.

ಜೈಪುರದ ಮಲ್ಹೋತ್ರಾರ ಈ ಸಾಧನೆ ಕುರಿತು ಲಿಂಕ್ಡಿನ್‌ನಲ್ಲಿ ಶೇರ್‌ ಮಾಡಿದ ಜೇಯ್ಪೀ ತಾಂತ್ರಿಕ ವಿವಿ, “ನಮ್ಮ ವಿದ್ಯಾರ್ಥಿನಿ ಆವ್ನಿ ಮಲ್ಹೋತ್ರಾ (2018ರಲ್ಲಿ ಪಾಸ್‌ಔಟ್ ಆದ ಬ್ಯಾಚ್‌) ಇತ್ತೀಚೆಗೆ ತಮ್ಮ ಕನಸಿನ ಕೆಲಸವೊಂದನ್ನು ಮೈಕ್ರೋಸಾಫ್ಟ್‌ನಲ್ಲಿ ಗಿಟ್ಟಿಸಿರುವುದು ಆಕೆಯ ಪರಿಶ್ರಮ ಹಾಗೂ ಬದ್ಧತೆಗೆ ಸಿಕ್ಕ ಫಲವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ,” ಎಂದು ಹೇಳಿಕೊಂಡಿದೆ.

ಈ ವರ್ಷದ ಪ್ಲೇಸ್ಮೆಂಟ್‌‌ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚಿನ ಕಂಪನಿಗಳು ಆಗಮಿಸಿದ್ದು, ₹64.61 ಲಕ್ಷ ರೂ.ಗಳ ಪ್ಯಾಕೇಜ್ ಕೊಟ್ಟಿದ್ದು ಈ ವರ್ಷದ ಅತ್ಯಧಿಕ ಪ್ಯಾಕೇಜ್ ಆಗಿದೆ ಎಂದು ಲಿಂಕ್ಡಿನ್‌ನಲ್ಲಿ ಸಂಭಾಲ್ಪುರದ ಐಐಎಂ ಹೇಳಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read