ಆಸ್ಕರ್ ಪ್ರಶಸ್ತಿ ಗೆದ್ದ ಮೇಲೆ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಕ್ರೇಜ್ ಇನ್ನೂ ಜೋರಾಗಿಯೇ ಸಾಗುತ್ತಿದ್ದು, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಅನೇಕ ಆನ್‌ಲೈನ್ ವೀಡಿಯೊಗಳು ‘ಆರ್‌ಆರ್‌ಆರ್’ ಹಾಡಿಗೆ ಸ್ಟೆಪ್ ಹಾಕುವುದರಿಂದ ತುಂಬಿ ಹೋಗಿದೆ.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಮಲಯಾಳಂ ದಿನಪತ್ರಿಕೆಯೊಂದು ಈ ಹಾಡಿಗೆ ಹೇಗೆ ಡಾನ್ಸ್ ಮಾಡಬೇಕು ಎಂಬ ಕುರಿತು ವಿವರವಾಗಿ ಹಂತ-ಹಂತದ ಟ್ಯುಟೋರಿಯಲ್ ಅನ್ನು ಮುದ್ರಿಸಿದ್ದು ಭಾರಿ ವೈರಲ್ ಆಗುತ್ತಿದೆ.
ಮಲಯಾಳ ಮನೋರಮಾ ಪತ್ರಿಕೆಯು ‘ನಾಟು ನಾಟು’ ನೃತ್ಯವನ್ನು ಹೇಗೆ ಪ್ರದರ್ಶಿಸಬೇಕು ಎಂಬುದರ ಕುರಿತು ಸಮಗ್ರ ಟ್ಯುಟೋರಿಯಲ್ ಅನ್ನು ಒದಗಿಸಿದೆ, ನೃತ್ಯ ಸಂಯೋಜನೆಯನ್ನು ಮೂರು ಭಾಗಗಳಾಗಿ ವಿಭಜಿಸಲಾಗಿದೆ.
ಪ್ರತಿ ಹಂತವನ್ನು ವಿವರಿಸಲು ಕಾರ್ಟೂನ್ ಬಳಸಲಾಗಿದೆ. ಈ ಲೇಖನದಲ್ಲಿ ಲೇಖನವು ಸ್ಟಾರ್ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮೂಲ ನೃತ್ಯವನ್ನು ಪ್ರದರ್ಶಿಸುವ ಕಾರ್ಟೂನ್ ಕೂಡ ಬಳಕೆ ಮಾಡಲಾಗಿದೆ.
ಇದರಿಂದಾಗಿ ಈ ಪತ್ರಿಕೆಯನ್ನು ಕೊಂಡು ಓದುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಹಲವಾರು ಮಂದಿ ವಿಧವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ವೃತ್ತ ಪತ್ರಿಕೆಯಲ್ಲಿ ಇಂಥ ಲೇಖನ ಹಾಕಿರುವುದಕ್ಕೆ ಟ್ರೋಲ್ ಕೂಡ ಮಾಡುತ್ತಿದ್ದಾರೆ.