ಯಾವುದೇ ಕಾಲದ ಮಕ್ಕಳಿಗೂ ಇಷ್ಟವಾಗುವ ಸಹಜ ವ್ಯಾಯಾಮಗಳಲ್ಲಿ ಒಂದಾದ ಸೈಕ್ಲಿಂಗ್ ಇತ್ತೀಚಿನ ದಿನಗಳಲ್ಲೂ ಸಹ ಜನಪ್ರಿಯ ಅಭ್ಯಾಸವಾಗಿದೆ.
ಸುಲಭವಾಗಿ ಮಾಡಬಹುದಾದ ವ್ಯಾಯಾಮವಾದ ಸೈಕ್ಲಿಂಗ್‌ನಿಂದಾಗಿ ನಿಮ್ಮ ಆಯುಷ್ಯವನ್ನು ಇನ್ನಷ್ಟು ವರ್ಷಗಳ ಮಟ್ಟಿಗೆ ವರ್ಧಿಸುವುದು. ಹೇಗೆ ಎಂದಿರಾ?
* ಪ್ರತಿನಿತ್ಯ ಕನಿಷ್ಠ 20-30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಹೃದಯದ ಸ್ನಾಯುಗಳು ಬಲಗೊಂಡು, ರಕ್ತ ಪರಿಚಲನೆ ಸುಧಾರಿಸುವುದಲ್ಲದೇ ಸ್ಟ್ರೋಕ್ ಹಾಗೂ ಹೃದಯಾಘಾತದ ಸಾಧ್ಯತೆಗಳನ್ನು 15%ರಷ್ಟು ಕಡಿಮೆ ಮಾಡುತ್ತದೆ.
* ಟೈಪ್ 1, ಟೈ 2 ಅಥವಾ ಜೆಸ್ಟೇಷನ್ ವಿಧದ ಡಯಾಬಿಟಿಸ್ ಬರುವ ಸಾಧ್ಯತೆ ಜಗತ್ತಿನೆಲ್ಲೆಡೆ ಅಧಿಕವಾಗಿದೆ. ಹೀಗಿರುವಾದ ಪಥ್ಯದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುವುದರೊಂದಿಗೆ ಕನಿಷ್ಠ ಐದು ವರ್ಷಗಳ ಮಟ್ಟಿಗೆ ಸೈಕ್ಲಿಂಗ್ ಅಭ್ಯಾಸ ಮಾಡಿಕೊಂಡರೆ ಸಕ್ಕರೆ ಕಾಯಿಲೆಯ ಸಮಸ್ಯೆಗಳಿಂದ ಸಾಯುವ ಸಾಧ್ಯತೆ 35% ಕಡಿಮೆಯಾಗುತ್ತದೆ ಎಂದು ಯೂರೋಪಿಯನ್ ಪ್ರೊಸ್ಪೆಕ್ಟಿವ್ ಇಕ್ವೆಸ್ಟಿಗೇಷನ್ ಇಂಟೂ ಕ್ಯಾನ್ಸರ್ ಅಂಡ್ ನ್ಯೂಟ್ರಿಷನ್ ಸ್ಟಡಿಯ ಅಧ್ಯಯನವೊಂದು ತಿಳಿಸುತ್ತದೆ.
* ಗಂಟೆಗೆ 20-22 ಕಿಮೀ ವೇಗದಲ್ಲಿ ಅರ್ಧ ಗಂಟೆ ಸೈಕ್ಲಿಂಗ್ ಮಾಡಿದರೆ ಸರಾಸರಿ ವ್ಯಕ್ತಿಯೊಬ್ಬ 298 ಕ್ಯಾಲೊರಿ ಸುಟ್ಟು ಹಾಕಬಹುದು. ಹೀಗಾಗಿ ಸೈಕ್ಲಿಂಗ್‌ನಿಂದ ತೂಕ ಇಳಿಸಲು ಸಹ ನೆರವಾಗುತ್ತದೆ.