
ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಖಾದ್ಯಗಳು ಉತ್ತಮ ಪರಿಮಳ ಬೀರುವುದರ ಜೊತೆಗೆ ರುಚಿಯೂ ಸೂಪರ್ ಆಗಿರುತ್ತದೆ.
* ಅಡುಗೆಗೆ ಬಳಸುವ ಬಾಣಲೆ ಇತ್ಯಾದಿ ಚೆನ್ನಾಗಿ ಬಿಸಿಯಾದ ಮೇಲೆ ಅದಕ್ಕೆ ಸಾಮಾಗ್ರಿಗಳನ್ನು ಹಾಕಬೇಕು. ಪಾತ್ರೆ ಸೂಕ್ತ ಪ್ರಮಾಣದಲ್ಲಿ ಕಾಯದಿದ್ದರೆ ಸಾಮಗ್ರಿಯ ನೈಜ ಪರಿಮಳ ಹೊರಹೊಮ್ಮುವುದಿಲ್ಲ.
* ಕೆಲವರು ಅಡುಗೆ ಕೆಲಸ ಆರಂಭಿಸುವ ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಹೆಚ್ಚುತ್ತಾರೆ. ಇದರಿಂದ ಆ ಖಾದ್ಯಕ್ಕೆ ನೈಜ ಪರಿಮಳ ಸಿಗುವುದಿಲ್ಲ. ಬೇಗ ಹೆಚ್ಚಿಟ್ಟರೆ ಅದರ ತೀಕ್ಷ್ಣ ಪರಿಮಳ ಹೋಗುತ್ತದೆ. ಆದ್ದರಿಂದ ಈರುಳ್ಳಿ, ಬೆಳ್ಳುಳ್ಳಿಯನ್ನು ಅಡುಗೆ ಮಾಡುವ ಕೊನೆಯ ಹಂತದಲ್ಲಿ ಹೆಚ್ಚಿಕೊಳ್ಳಬೇಕು.
* ಅಡುಗೆ ಬೇಗ ಆಗಬೇಕೆಂದು ಕೆಲವರು ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಹಾಕುತ್ತಾರೆ. ಇದರಿಂದ ಅದರ ರುಚಿಯೇ ಬೇರೆಯಾಗುತ್ತದೆ. ಪ್ರತಿ ಸಾಮಾಗ್ರಿ ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಅದನ್ನು ಆಯಾ ಕ್ರಮದಲ್ಲಿ ಹಾಕಿದರೆ ಮಾತ್ರ ನೈಜ ರುಚಿ ಸಿಗುತ್ತದೆ. ಅದ್ದರಿಂದ ಮೊದಲಿಗೆ ಎಣ್ಣೆ ನಂತರ ಈರುಳ್ಳಿ, ಬೆಳ್ಳುಳ್ಳಿ ಆಮೇಲೆ ಮಸಾಲೆ ಸಾಮಗ್ರಿ ಇತ್ಯಾದಿಗಳನ್ನು ಹಾಕಬೇಕು.
* ಖಾದ್ಯಗಳಿಗೆ ಹಾಕುವಾಗ ಟೊಮ್ಯಾಟೋ ಬೀಜಗಳನ್ನು ತೆಗೆಯಬಾರದು. ಅದರ ಬೀಜ, ತಿರುಳು ಸ್ವಾದಿಷ್ಟಕರವಾಗಿರುತ್ತದೆ. ಇದರ ಬಳಕೆಯಿಂದ ಆಹಾರ ಇನ್ನಷ್ಟು ರುಚಿಯಾಗಿರುತ್ತದೆ.
* ತರಕಾರಿ ಹೋಳುಗಳನ್ನು ಅಧಿಕ ಉರಿಯಲ್ಲಿಟ್ಟು ಹುರಿಯಬೇಕು. ಇದರಿಂದ ತರಕಾರಿ ವಿಶಿಷ್ಟ ಪರಿಮಳ ಹೊರಹೊಮ್ಮಿಸಿ ಖಾದ್ಯಕ್ಕೆ ಹೊಸ ರುಚಿ ಕೊಡುತ್ತದೆ.
* ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮುಂತಾದ ಹಸಿ ಮಸಾಲೆ ಸಾಮಗ್ರಿಗಳನ್ನು ಬೆಣ್ಣೆ ಅಥವಾ ಎಣ್ಣೆಯಲ್ಲಿ ಒಂದೆರಡು ನಿಮಿಷ ಹುರಿದು ಖಾದ್ಯಕ್ಕೆ ಹಾಕಿದರೆ ಆಹಾರಕ್ಕೆ ವಿಶೇಷ ಪರಿಮಳ ಬರುತ್ತದೆ.