ಹರಿಯಾಣದ ಪಂಚಕುಲದಲ್ಲಿರುವ ಫಾರ್ಮಾ ಕಂಪನಿಯೊಂದರ ಉದ್ಯೋಗಿಗಳಿಗೆ ಈ ಬಾರಿಯ ದೀಪಾವಳಿ ಹಬ್ಬ ವಿಶೇಷ ಎನಿಸಿದೆ.
ಈ ಕಂಪನಿಯ ಮಾಲೀಕರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರ್ ಗಳನ್ನು ನೀಡಿದರು. ಕಂಪನಿ ಮಾಲೀಕ ಎಂ.ಕೆ. ಭಾಟಿಯಾ ಅವರು ನೌಕರರಿಗೆ ಕಾರ್ ಗಳ ಕೀಗಳನ್ನು ಹಸ್ತಾಂತರಿಸಿದರು. ಭಾಟಿಯಾ ತನ್ನ ಕಂಪನಿಯ ಉದ್ಯೋಗಿಗಳನ್ನು ಉದ್ಯೋಗಿ ಎಂದು ಕರೆಯುವ ಬದಲು ಸೆಲೆಬ್ರಿಟಿಗಳು ಮತ್ತು ಸ್ಟಾರ್‌ಗಳು ಎಂದು ಸಂಬೋಧಿಸುತ್ತಾರೆ. ದೀಪಾವಳಿಯಂದು ಅವರು ತಮ್ಮ ಕಂಪನಿಯ 12 ಸ್ಟಾರ್ ಸೆಲೆಬ್ರಿಟಿಗಳಿಗೆ ಟಾಟಾ ಪಂಚ್ ಕಾರ್ ಗಳನ್ನು ಉಡುಗೊರೆಯಾಗಿ ನೀಡಿದರು.
ಶೀಘ್ರದಲ್ಲೇ ಇನ್ನೂ 38 ಉದ್ಯೋಗಿಗಳಿಗೆ ಕಾರ್
ಮಿಸ್ಟ್ ಕಾರ್ಟ್ ಫಾರ್ಮಾ ತನ್ನ ಉದ್ಯೋಗಿಗಳ ಪರಿಶ್ರಮದಿಂದ ಇಂದು ಈ ಹಂತಕ್ಕೆ ತಲುಪಿದೆ ಎಂದು ಭಾಟಿಯಾ ಹೇಳಿದರು. ಕನಸಿನೊಂದಿಗೆ ಚಂಡೀಗಢಕ್ಕೆ ಬಂದಿದ್ದೇನೆ ಎಂದರು. ಈ ಕನಸು ನನಸಾಗುವಲ್ಲಿ ಈ ಉದ್ಯೋಗಿಗಳ ಪಾತ್ರ ದೊಡ್ಡದು. ಈ ಕಾರಣಕ್ಕಾಗಿ ಈ ದೀಪಾವಳಿಯಲ್ಲಿ ಉದ್ಯೋಗಿಗಳಿಗೆ ಅದ್ಭುತ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ. ಕೆಲ ಸಮಯದ ಹಿಂದೆ ಉದ್ಯೋಗಿಗಳಿಗೆ ಕಾರ್ ಕೊಡಿಸುವುದಾಗಿ ಹೇಳಿದ್ದ ಅವರು ಇಂದು ಭರವಸೆ ಈಡೇರಿಸಿದ್ದಾರೆ. ದೀಪಾವಳಿ ಉಡುಗೊರೆಯಾಗಿ ತಮ್ಮ 12 ಉದ್ಯೋಗಿಗಳಿಗೆ ಕಾರ್ ಗಳನ್ನು ನೀಡಿದ್ದು, ಶೀಘ್ರದಲ್ಲೇ ಇನ್ನೂ 38 ಉದ್ಯೋಗಿಗಳಿಗೆ ಕಾರುಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಆಫೀಸ್ ಬಾಯ್ ಗೂ ಕಾರ್
ಅದೇ ಸಮಯದಲ್ಲಿ, ಈ ಅದ್ಭುತ ದೀಪಾವಳಿ ಉಡುಗೊರೆಯನ್ನು ಪಡೆದವರಲ್ಲಿ ಕಂಪನಿಯ ಆಫೀಸ್ ಬಾಯ್ ಕೂಡ ಇದ್ದಾರೆ.
ಮಿಟ್ಸ್ ಹೆಲ್ತ್ ಕೇರ್ ಎಂಬ ಕಂಪನಿಯ ಮಾಲೀಕರು ಇಂದು ಈ ಸ್ಥಾನಕ್ಕೆ ತಲುಪಲು ಈ ಉದ್ಯೋಗಿಗಳ ಪರಿಶ್ರಮವೇ ಕಾರಣ ಎನ್ನುತ್ತಾರೆ. ಮೊದಲಿನಿಂದಲೂ ಈ ನೌಕರರು ಜೊತೆಗಿದ್ದಾರೆ. ಅವರ ಶ್ರಮ, ಪ್ರಾಮಾಣಿಕತೆ ಮತ್ತು ನಂಬಿಕೆಗೆ ಸಿಕ್ಕ ಪ್ರತಿಫಲವೇ ಈ ಕಾರ್.
ಕೆಲವರಿಗೆ ವಾಹನ ಚಲಾಯಿಸುವುದೂ ಗೊತ್ತಿಲ್ಲ
ವಿಶೇಷವೆಂದರೆ ಕೆಲವು ಉದ್ಯೋಗಿಗಳಿಗೆ ಕಾರ್ ಓಡಿಸಲು ಸಹ ತಿಳಿದಿಲ್ಲ. ಕಂಪನಿಯವರು ಕಾರ್ ಅನ್ನು ಉಡುಗೊರೆಯಾಗಿ ಕೊಡುತ್ತಾರೆಂದು ಯಾರೂ ಕನಸಿನಲ್ಲೂ ಊಹಿಸಿರಲಿಲ್ಲ. ಈ ಉಡುಗೊರೆಯನ್ನು ಸ್ವೀಕರಿಸಿದ ಅವರ ಉದ್ಯೋಗಿಗಳು ಆಶ್ಚರ್ಯಚಕಿತರಾದರು. ಕಂಪನಿಯು ಆಫೀಸ್ ಬಾಯ್ ಮೋಹಿತ್‌ಗೆ ಕಾರನ್ನು ಉಡುಗೊರೆಯಾಗಿ ನೀಡಿದೆ. ಮೋಹಿತ್ ಮೊದಲಿನಿಂದಲೂ ಕಂಪನಿಯಲ್ಲಿದ್ದಾರೆ ಮತ್ತು ಸಂಪೂರ್ಣ ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಭಾಟಿಯಾ ಹೇಳುತ್ತಾರೆ.