ಹಿಂದೂ ಧರ್ಮದಲ್ಲಿ ಪಂಚದೇವರ ಪೂಜೆಗೆ ಮಹತ್ವ ನೀಡಲಾಗಿದೆ. ಪ್ರತಿ ದಿನ ಗಣೇಶ, ಈಶ್ವರ, ವಿಷ್ಣು, ದುರ್ಗೆ ಹಾಗೂ ಸೂರ್ಯನ ಪೂಜೆ ಮಾಡಬೇಕು ಎನ್ನಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಸೂರ್ಯದೇವನ ದರ್ಶನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ದೂರವಾಗುತ್ತದೆ.
ಬೆಳಿಗ್ಗೆ ಬೇಗ ಎದ್ದು ಸೂರ್ಯನ ದರ್ಶನ ಪಡೆದು ಜಲ ಅರ್ಪಣೆ ಮಾಡಿದ್ರೆ ಜಾತಕದ ಎಲ್ಲ ದೋಷ ನಿವಾರಣೆಯಾಗುತ್ತದೆ. ಗ್ರಹಗಳ ರಾಜ ಸೂರ್ಯ ಎನ್ನಲಾಗಿದೆ. ಭಗವಂತ ಶ್ರೀರಾಮ ಕೂಡ ಸೂರ್ಯನ ಆರಾಧನೆ ಮಾಡ್ತಿದ್ದ. ಸೂರ್ಯನ ಕೃಪೆಗೆ ಪಾತ್ರರಾಗಬಯಸುವವರು ಏಳು ಕುದುರೆ ಮೇಲೆ ಸವಾರಿ ಮಾಡಿರುವ ಸೂರ್ಯನ ಫೋಟೋವನ್ನು ಮನೆಯಲ್ಲಿ ಹಾಕಬೇಕು. ಫೋಟೋವನ್ನು ಪೂರ್ವ ದಿಕ್ಕಿಗೆ ಹಾಕಬೇಕು. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ.
ಪ್ರತಿ ದಿನ ಮನೆಯಿಂದ ಹೋಗುವ ಮೊದಲು ಈ ಫೋಟೋವನ್ನು ನೋಡಿ ಪ್ರಾರ್ಥನೆ ಮಾಡಬೇಕು. ಇದ್ರಿಂದ ವ್ಯಾಪಾರ, ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ.
ಸೂರ್ಯನಿಗೆ ಪ್ರತಿ ದಿನ ಬೆಳಿಗ್ಗೆ ಜಲ ಅರ್ಪಣೆ ಮಾಡಬೇಕು. ತಾಮ್ರದ ಲೋಟದಲ್ಲಿ ಅಕ್ಕಿ, ಕಂಕುಮ, ಕೆಂಪು ಹೂ ಹಾಕಿ ಜಲ ಅರ್ಪಿಸಬೇಕು.
ಸೂರ್ಯನ ಕೃಪೆಗೆ ಪಾತ್ರರಾಗಲು ನಿಮ್ಮ ತೂಕದಷ್ಟು ಅಥವಾ ಸಾಧ್ಯವಾದಷ್ಟು ಗೋಧಿಯನ್ನು ದಾನ ಮಾಡಬೇಕು.
ತಾಮ್ರದ ಪಾತ್ರೆ, ಬೆಲ್ಲ, ಕೆಂಪು ಅಥವಾ ಹಳದಿ ಬಟ್ಟೆಯನ್ನು ದಾನ ಮಾಡಬಹುದು.