
ಮಂಗಳೂರು: ಸ್ನೇಹಿತನ ಮದುವೆಯಾದ ಸಂಭ್ರಮದಲ್ಲಿ ಮೊದಲ ರಾತ್ರಿಗೆ ಶುಭ ಕೋರಿ ಆತನ ಗೆಳೆಯರು ಫ್ಲೆಕ್ಸ್ ಬ್ಯಾನರ್ ಹಾಕಿದ್ದಾರೆ. ಮೊದಲ ರಾತ್ರಿಯ ಸಂಭ್ರಮ, ಗೆದ್ದು ಬಾ ಗೆಳೆಯ ಎಂದೆಲ್ಲ ಬರೆದ ಬ್ಯಾನರನ್ನು ಸಾರ್ವಜನಿಕವಾಗಿ ಅಳವಡಿಸಲಾಗಿದ್ದು, ಆಕ್ಷೇಪಣೆ ಹಿನ್ನೆಲೆಯಲ್ಲಿ ಇದನ್ನು ತೆರವುಗೊಳಿಸಲಾಗಿದೆ.
ಮಂಗಳೂರಿನ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುಮಗನ ಮೊದಲ ರಾತ್ರಿಗೆ ಶುಭಕೋರುವ ನೆಪದಲ್ಲಿ ಗೆಳೆಯರು ಅನಧಿಕೃತ ಬ್ಯಾನರ್ ಅನ್ನು ಸಾರ್ವಜನಿಕವಾಗಿ ಅಳವಡಿಸಿದ್ದು, ಅದರಲ್ಲಿ ಮದುಮಗನ ಫೋಟೋ ಹಾಕಿ ಮೊದಲ ರಾತ್ರಿಯ ಸಂಭ್ರಮ, ಗೆದ್ದು ಬಾ ಗೆಳೆಯ ಎಂದೆಲ್ಲ ಬರೆಯಲಾಗಿದೆ. ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.