ಮತ್ತೆ ಬೆಚ್ಚಿಬಿದ್ದ ಟರ್ಕಿ: 5.4 ತೀವ್ರತೆಯ 5ನೇ ಭೂಕಂಪ, 5000 ದಾಟಿದ ಸಾವಿನ ಸಂಖ್ಯೆ

ಅಡಾನಾ(ಟರ್ಕಿ): ಪೂರ್ವ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪ ಮತ್ತು ಬಹು ಭೂಕಂಪಗಳಿಂದ ಉರುಳಿಬಿದ್ದ ಸಾವಿರಾರು ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಮೃತರ ಸಂಖ್ಯೆ ಏರುತ್ತಲೇ ಇದ್ದು, 5,000 ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ. ಸಿರಿಯಾದ 12 ವರ್ಷಗಳ ಅಂತರ್ಯುದ್ಧ ಮತ್ತು ನಿರಾಶ್ರಿತರ ಬಿಕ್ಕಟ್ಟಿನಿಂದ ಸುತ್ತುವರಿದ ಪ್ರದೇಶದಲ್ಲಿ ಹರಡಿರುವ ಲೋಹ ಮತ್ತು ಕಾಂಕ್ರೀಟ್‌ನ ಬಟ್ಟದಂತಹ ರಾಶಿಗೋಜಲುಗಳ ನಡುವೆ ರಕ್ಷಣಾ ಸಿಬ್ಬಂದಿ ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಸೋಮವಾರದ ಮುಂಜಾನೆ ಭೂಕಂಪ, ನಂತರದ ಆಘಾತಗಳು ಮತ್ತು ಎರಡು ಭೂಕಂಪಗಳ ಸಾವಿನ ಸಂಖ್ಯೆ ಏರುತ್ತಲೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊದಲ ಭೂಕಂಪ ಸಂಭವಿಸಿದಾಗ ನಿವಾಸಿಗಳಿಂದ ತುಂಬಿದ ಬಹುಮಹಡಿ ಅಪಾರ್ಟ್‌ಮೆಂಟ್ ಬ್ಲಾಕ್‌ ಗಳು ಸೇರಿದಂತೆ ಹಲವಾರು ನಗರಗಳಲ್ಲಿ 5,600 ಕ್ಕೂ ಹೆಚ್ಚು ಕಟ್ಟಡಗಳು ಕುಸಿದಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ನಿರಾಶ್ರಿತರಾದ ಜನರು ಶೀತದಲ್ಲಿ ರಾತ್ರಿ ಕಳೆದಿದ್ದಾರೆ. ಭೂಕಂಪದ ಕೇಂದ್ರದಿಂದ ಸುಮಾರು 33 ಕಿಲೋಮೀಟರ್ ದೂರದಲ್ಲಿರುವ ಪ್ರಾಂತೀಯ ರಾಜಧಾನಿಯಾದ ಟರ್ಕಿಶ್ ನಗರವಾದ ಗಾಜಿಯಾಂಟೆಪ್‌ ನಲ್ಲಿ ಜನರು ಶಾಪಿಂಗ್ ಮಾಲ್‌ ಗಳು, ಕ್ರೀಡಾಂಗಣಗಳು, ಮಸೀದಿಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಆಶ್ರಯ ಪಡೆದರು. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ, 10 ಪ್ರಾಂತ್ಯಗಳಲ್ಲಿ 3 ತಿಂಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read