ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ ಪೌಡರ್, ಕ್ರೀಂ ಗಿಂತ ಮಕ್ಕಳ ಕ್ರೀಂ ಹೇಗೆ ಭಿನ್ನವಾಗಿರುತ್ತದೆ, ಮಕ್ಕಳ ಕ್ರೀಮ್ ಅನ್ನು ಏಕೆ ಬಳಸಬಾರದು ತಿಳಿಯೋಣ ಬನ್ನಿ.
ದೊಡ್ಡವರ ತ್ವಚೆಗೆ ಹೋಲಿಸಿದರೆ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಅವರ ತ್ವಚೆ ರಕ್ಷಣೆಗೆ ಯಾವುದೇ ಎಣ್ಣೆಯಂಶ ಉತ್ಪತ್ತಿಯಾಗುವುದಿಲ್ಲ, ಹೀಗಾಗಿ ಅವರಿಗೆ ಬೇಗ ಅಲರ್ಜಿ ಉಂಟಾಗುತ್ತದೆ. ಆದ್ದರಿಂದ ಬೇಬಿ ಕ್ರೀಮ್ ಗಳಲ್ಲಿ pH ಬ್ಯಾಲೆನ್ಸ್ ಇರುವಂತೆ ಇಡಲಾಗಿರುತ್ತದೆ.
ಇನ್ನು ಮಕ್ಕಳ ಕ್ರೀಮ್ಗಳಲ್ಲಿ ಆಲ್ಕೋಹಾಲ್ ಅಂಶವಿರುವುದಿಲ್ಲ. ದೊಡ್ಡವರ ತ್ವಚೆ ಕ್ಲೆನ್ಸ್ ಆಗಲು ಆಲ್ಕೋಹಾಲ್ ಅಂಶವಿರಬೇಕು.
ಮಕ್ಕಳ ಕ್ರೀಮ್ ಅನ್ನು ಅವರ ಸೂಕ್ಷ್ಮ ತ್ವಚೆಗೆ ಅನುಗುಣವಾಗಿ ತಯಾರಿಸಲಾಗಿರುತ್ತದೆ. ಆದರೆ ಇದನ್ನೇ ಸೂಕ್ಷ್ಮ ತ್ವಚೆಯ ದೊಡ್ಡವರು ಬಳಸಿದರೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ.