ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳೋದೇಕೆ ಗೊತ್ತಾ….?

ಜ್ಯೋತಿಷ್ಯದ ಪ್ರಕಾರ ಕಪ್ಪು ದಾರವನ್ನ ಕೈಗೆ ಇಲ್ಲವೇ ಕಾಲಿಗೆ ಧರಿಸೋದು ತುಂಬಾನೇ ಒಳ್ಳೆಯದು. ಇದು ಮನುಷ್ಯನಲ್ಲಿರುವ ದುರ್ಬಲತೆಯನ್ನ ಕಡಿಮೆ ಮಾಡಿ ಖುಷಿ, ಸಂಪತ್ತನ್ನ ಹೆಚ್ಚಿಸುತ್ತೆ ಎಂದು ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ.

ಕಪ್ಪು ದಾರವನ್ನ ಹೇಗೆ ಧರಿಸಬೇಕು?

ಕಪ್ಪು ದಾರ ನಿಮ್ಮನ್ನ ಕೆಟ್ಟ ಶಕ್ತಿಗಳಿಂದ ಬಚಾವ್​ ಮಾಡುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರೂ ನಂಬುವಂತಹ ವಿಚಾರ. ಆದರೆ ಇದೇ ಕಪ್ಪು ದಾರ ನಿಮ್ಮನ್ನ ಶ್ರೀಮಂತ ವ್ಯಕ್ತಿಯನ್ನಾಗಿಯೂ ಮಾಡಬಲ್ಲದು. ರೇಷ್ಮೆ ಇಲ್ಲವೇ ಹತ್ತಿಯಿಂದ ಮಾಡಲಾದ ಕಪ್ಪು ದಾರವನ್ನ ಪೇಟೆಯಿಂದ ತಂದು ಅದನ್ನ ಹತ್ತಿರದ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಇಲ್ಲವೇ ಶನಿವಾರ ಸಂಜೆ ಪೂಜೆ ಮಾಡಿಸಿ. ಇದಾದ ಬಳಿಕ ಈ ದಾರವನ್ನ ನಿಮ್ಮ ಕುತ್ತಿಗೆಗೆ ಇಲ್ಲವೇ ಕಾಲಿಗೆ ಧರಿಸಿ.

ಕಪ್ಪು ದಾರ ಧರಿಸೋದರ ಹಿಂದಿನ ಲಾಭಗಳು:

1. ಕಪ್ಪು ದಾರ ನಿಮ್ಮನ್ನ ಕೆಟ್ಟ ಶಕ್ತಿಗಳಿಂದ ದೂರವಿಡಲಿದೆ. ನಿಮ್ಮ ಜೀವನದಲ್ಲಿ ಹಣಕ್ಕೆ ಎಂದಿಗೂ ಕೊರತೆ ಇರೋದಿಲ್ಲ.

2. ಕಪ್ಪು ದಾರವನ್ನ ಧರಿಸೋದ್ರಿಂದ ನಿಮ್ಮ ಉದ್ಯಮದಲ್ಲಿ ಲಾಭ ಕಾಣಬಹುದಾಗಿದೆ.

3. ಗ್ರಹಗತಿ ದೋಷಗಳನ್ನೂ ಇದು ವಾಸಿ ಮಾಡಲಿದೆ.

4. ಸಂಪತ್ತು ಹೆಚ್ಚಲಿದೆ.

5. ಕಪ್ಪು ದಾರ ನಿಮಗೆ ರಕ್ಷಣಾ ಕವಚದಂತೆ ಇರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read