alex Certify ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರಿನ ಪ್ರಮಾಣವಿರುತ್ತದೆ. ಮೆದುಳು ಮತ್ತು ಹೃದಯದಲ್ಲಿ ಶೇಕಡಾ 73ರಷ್ಟು, ಶ್ವಾಸಕೋಶದಲ್ಲಿ ಶೇಕಡಾ 83ರಷ್ಟು, ಸ್ನಾಯುಗಳಲ್ಲಿ ಶೇಕಡಾ 64 ರಷ್ಟು ಮತ್ತು ಮೂತ್ರಪಿಂಡಗಳಲ್ಲಿ ಶೇಕಡಾ 79 ರಷ್ಟು ನೀರಿನ ಅಂಶವಿರುತ್ತದೆ.

ದೇಹದಲ್ಲಿರುವ ನೀರು, ದೇಹದ ಉಷ್ಣತೆಯನ್ನು ಸಾಮಾನ್ಯವಾಗಿಸುವ ಜೊತೆ ನೀರು ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ತಲುಪಿಸಲು ಮತ್ತು ದೇಹದ ಆಂತರಿಕ ಅಂಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ.

ಬೆವರು ಅಥವಾ ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ನೀರು ಹೊರಬಂದಾಗ,  ತಕ್ಷಣ ನೀರನ್ನು ಪೂರೈಸುವುದು ಬಹಳ ಮುಖ್ಯ. ವಯಸ್ಕರು, ನೀರಿನ ಮಹತ್ವ ಅರಿತು, ಪ್ರತಿ ದಿನ ನೀರು ಕುಡಿಯುತ್ತಾರೆ. ಆದ್ರೆ ಮಕ್ಕಳಿಗೆ ಅದ್ರ ಮಹತ್ವ ತಿಳಿದಿರುವುದಿಲ್ಲ. ಅವರು ನೀರು ಕುಡಿಯುವುದಿಲ್ಲ. ಮಕ್ಕಳಿಗೆ ನೀರು ಕುಡಿಸುವುದು ಸವಾಲಿನ ಕೆಲಸ. ಮಕ್ಕಳಿಗೆ ನೀರು ಕುಡಿಸಲು ಕೆಲವೊಂದು ಪ್ಲಾನ್ ಮಾಡಬಹುದು.

ಮಗುವಿನ ಕಣ್ಣಿಗೆ ಕಾಣುವಂತೆ ಬಾಟಲಿಯಲ್ಲಿ ನೀರು ಇಡಿ. ಬಾಯಾರಿಕೆ ಆದ ತಕ್ಷಣ ಅವರ ಕಣ್ಣಿಗೆ ನೀರಿನ ಬಾಟಲಿ ಕಾಣಿಸುತ್ತದೆ. ಅವರು ಸುಲಭವಾಗಿ ನೀರು ಸೇವನೆ ಮಾಡ್ತಾರೆ.

ಶಾಲೆಗೆ ಹೋಗುವಾಗ ನೀರಿನ ಬಾಟಲಿ ನೀಡಿ. ಶಾಲೆಯಿಂದ ಬರುವ ಮೊದಲು ನೀರಿನ ಬಾಟಲಿಯಲ್ಲಿರುವ ನೀರನ್ನು ಖಾಲಿ ಮಾಡಿಕೊಂಡು ಬರುವ ಷರತ್ತು ಹಾಕಿ.

ಬಾಲ್ಯದಿಂದಲೂ ನೀರು ಕುಡಿಯಲು ಸಮಯ ನಿಗದಿಪಡಿಸಿ. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಲು ನೀಡಿ.

ಮಗು, ನೀರಿನ ಬಾಟಲಿಯನ್ನು ಖಾಲಿ ಮಾಡಿದಾಗ ಅವರ ಕೆಲಸವನ್ನು ಶ್ಲಾಘಿಸಿ.

ನೀರಿನ ಬಣ್ಣ ಹಾಗೂ ರುಚಿ ಸ್ವಲ್ಪ ಭಿನ್ನವಾಗಿದ್ದರೆ ಮಗು ಅದನ್ನು ಸೇವಿಸಲು ಇಷ್ಟಪಡುತ್ತದೆ. ಹಾಗಾಗಿ ನೀರಿಗೆ ಬಣ್ಣದ ಹೂವುಗಳನ್ನು ಹಾಕಿ, ಅದರ ಬಣ್ಣ ಬದಲಿಸಿ.

ಆಕರ್ಷಕ ಬಾಟಲಿ, ಮಗ್ ಗಳನ್ನು ಮಕ್ಕಳು ಇಷ್ಟಪಡ್ತಾರೆ. ಹಾಗಾಗಿ ಅವರಿಷ್ಟಪಡುವ ಬಾಟಲಿಯಲ್ಲಿ ನೀರನ್ನು ಹಾಕಿ ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...