ಮದುವೆಯೊಂದರ ಸಂಗೀತ್ ಕಾರ್ಯಕ್ರಮದಲ್ಲಿ ದೇಸೀ ವಧುವೊಬ್ಬಳು ತನ್ನ ರೋಲರ್ ಸ್ಕೇಟಿಂಗ್ ಕೌಶಲ್ಯದ ಪ್ರದರ್ಶನದ ಮೂಲಕ ಕುಟುಂಬಸ್ಥರು ಹಾಗೂ ಬಂಧುಗಳನ್ನು ಮಂತ್ರಮುಗ್ಧಗೊಳಿಸಿದ್ದಾಳೆ.
’ಬಾರ್ ಬಾರ್ ದೇಖೋ’ ಚಿತ್ರದ ’ಸೌ ಆಸ್ಮಾನ್’ ಹಾಡಿನ ಹಿನ್ನೆಲೆಯಲ್ಲಿ ಮದುಮಗಳು ಉದ್ದದ ಸ್ಕರ್ಟ್‌ಧಾರಿಯಾಗಿ ರೋಲರ್ ಸ್ಕೇಟ್‌ಗಳ ಮೇಲೆ ವೃತ್ತಾಕಾರವಾಗಿ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
15 ಕೆಜಿ ಲೆಹಂಗಾದಲ್ಲಿ ಮಿಂಚುತ್ತಿರುವ ಮದುಮಗಳ ಈ ನೃತ್ಯದ ವಿಡಿಯೋ 17 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.