HomeEntertainmentಪುಷ್ಪ-2 ʼಐಟಂ ಸಾಂಗ್ʼ ನಲ್ಲಿ ಹೆಜ್ಜೆ ಹಾಕಲಿದ್ದಾರಾ ಊರ್ವಶಿ ರೌಟೇಲಾ.....?

ಪುಷ್ಪ-2 ʼಐಟಂ ಸಾಂಗ್ʼ ನಲ್ಲಿ ಹೆಜ್ಜೆ ಹಾಕಲಿದ್ದಾರಾ ಊರ್ವಶಿ ರೌಟೇಲಾ…..?

ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ಚಿತ್ರದ ಐಟಂ ಸಾಂಗ್ ಗಾಗಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರನ್ನು ಕರೆಸುವ ಪ್ಲಾನ್ ನಲ್ಲಿ ನಿರ್ಮಾಪಕರು ಇದ್ದಾರೆ ಎನ್ನಲಾಗಿದೆ.

ಪುಷ್ಪ ಸಿನಿಮಾ ಹಿಟ್ ಆಗಲು ’ಹುಂ ಅಂಟಾವಾ’ ಐಟಂ ಸಾಂಗ್ ಕೂಡ ಕಾರಣವಾಗಿತ್ತು. ಈ ಹಾಡಿಗೆ ಸಮಂತಾ ಮೈಚಳಿ ಬಿಟ್ಟು ಕುಣಿದು ಪ್ರೇಕ್ಷಕರ ಮನಗೆದ್ದಿದ್ದರು. ಈಗ ಪುಷ್ಪ-2 ಚಿತ್ರದಲ್ಲೂ ಅಂತದ್ದೇ ಒಂದು ಐಟಂ ಸಾಂಗ್ ಫಾರ್ಮಾಲಾ ತರಲು ನಿರ್ಮಾಪಕರು ಮುಂದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಾರಿ ಐಟಂ ಸಾಂಗ್ ನಲ್ಲಿ ಬಾಲಿವುಡ್ ಮಾದಕ ಬೆಡಗಿ ಊರ್ವಶಿ ರೌಟೇಲಾ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಪುಷ್ಪ-2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಮಾಡಲು ನಿರ್ದೇಶಕ ಸುಕುಮಾರನ್ ಸಜ್ಜಾಗಿದ್ದಾರೆ. ಈ ದೃಶ್ಯವನ್ನು ತಿರುಪತಿಯ ಪೂರ್ವಘಟ್ಟದ ಸ್ವರ್ಣಮುಖಿ ನದಿ ತೀರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular