ಕ್ಯಾಪ್ಸಿಕಮ್ -1
ಈರುಳ್ಳಿ -1
ಟೊಮ್ಯಾಟೋ-3
ನೀರು-1,1/2 ಕಪ್
ಎಣ್ಣೆ – 3 ಟೇಬಲ್ ಚಮಚ
ಜೀರಿಗೆ – 1 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ- 1 ಟೇಬಲ್ ಚಮಚ
ಪನ್ನೀರ್ ತುಣುಕು -1 ಕಪ್
ಕಸೂರಿ ಮೇಥಿ- 1 ಟೇಬಲ್ ಚಮಚ ಮತ್ತು ಅಲಂಕಾರಕ್ಕೆ.
ಮಾಡುವ ವಿಧಾನ:
ಒಂದು ದೊಡ್ಡ ಕ್ಯಾಪ್ಸಿಕಮ್ ತೆಗೆದುಕೊಂಡು ದಪ್ಪಗೆ ಕತ್ತರಿಸಿಕೊಳ್ಳಿ. ತಿನ್ನುವಾಗ ಅದು ಬಾಯಿಗೆ ಸಿಗುವಂತೆ ಇರಬೇಕು. ಹಾಗೇ ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ಉದ್ದುದ್ದವಾಗಿ ಹೆಚ್ಚಿಟ್ಟುಕೊಳ್ಳಿ.
ಮೊದಲಿಗೆ ಕುಕ್ಕರ್ ಗೆ ನೀರು ಹಾಕಿ ಟೊಮ್ಯಾಟೋ ಬೇಯಿಸಿಕೊಳ್ಳಿ. ಬೆಂದ ಟೊಮ್ಯಾಟೋವಿನ ಸಿಪ್ಪೆಯನ್ನು ತೆಗೆದು ಮಿಕ್ಸರ್ ಜಾರ್‍ಗೆ ವರ್ಗಾಯಿಸಿ. ಅದಕ್ಕೆ ಬೆಳ್ಳುಳ್ಳಿ ಎಸಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಬಿಸಿಯಾದ ಪಾತ್ರೆಗೆ ಎಣ್ಣೆಯನ್ನು ಸೇರಿಸಿ ಜೀರಿಗೆಯನ್ನು ಹುರಿಯಿರಿ. ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವ ತನಕ ಹುರಿಯಿರಿ. ನಂತರ ಕ್ಯಾಪ್ಸಿಕಮ್‍ಅನ್ನು ಅದರಲ್ಲಿ ಹುರಿಯಿರಿ. 2 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ. ರುಬ್ಬಿಕೊಂಡ ಟೊಮ್ಯಾಟೋ ಪೇಸ್ಟ್ ಸೇರಿಸಿ ಬೇಯಲು ಬಿಡಿ. ಉಪ್ಪು, ಖಾರದ ಪುಡಿ, ಪನ್ನೀರ್ ಪೀಸ್, ಕಸೂರಿ ಮೇಥಿಯನ್ನು ಸೇರಿಸಿ ಮಿಶ್ರಗೊಳಿಸಿ. ಒಮ್ಮೆ ಬೆಂದ ಮೇಲೆ ಬೌಲ್‍ಗೆ ವರ್ಗಾಯಿಸಿ ಕಸೂರಿ ಮೇಥಿಯಿಂದ ಅಲಂಕಾರ ಮಾಡಿ. ಬಿಸಿ ಬಿಸಿ ಇರುವಾಗಲೇ ಈ ಪನ್ನೀರ್ – ಕ್ಯಾಪ್ಸಿಕಮ್ ಪಲ್ಯವನ್ನು ಸವಿಯಲು ನೀಡಿ.