alex Certify ನೇಣುಬಿಗಿದು ಕೋತಿ ಸಾಯಿಸಿದ ದುರುಳರು: ಆಘಾತಕಾರಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇಣುಬಿಗಿದು ಕೋತಿ ಸಾಯಿಸಿದ ದುರುಳರು: ಆಘಾತಕಾರಿ ವಿಡಿಯೋ ವೈರಲ್

ನವದೆಹಲಿ: ಕೋತಿಯನ್ನು ನೇಣು ಬಿಗಿದು ಸಾಯಿಸಿದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಶೆರ್ ಜೇಸುದಾಸ್ ಎಂಬ ಟ್ವಿಟರ್ ಬಳಕೆದಾರರು ಈ ಆಘಾತಕಾರಿ ವಿಡಿಯೋವನ್ನು ಟ್ವೀಟರ್​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಕೋತಿಯನ್ನು ಮರಕ್ಕೆ ಕಟ್ಟಿಹಾಕಿ ನೇಣು ಬಿಗಿದು ಸಾಯಿಸುವುದನ್ನು ನೋಡಬಹುದು. ಜೀವಂತ ಕೋತಿಯನ್ನೇ ನೇಣು ಹಾಕಿರುವುದಕ್ಕೆ ಸಾಕ್ಷಿಯಾದದ್ದು ಈ ಕೋತಿಯ ನಾಲಿಗೆ ಹೊರಕ್ಕೆ ಚಾಚಿರುವುದು.

ವರದಿಯ ಪ್ರಕಾರ, ಇದು ದೆಹಲಿಯ ಸರೈ ರೋಹಿಲಾ ಪ್ರದೇಶದಲ್ಲಿ ಸಂಭವಿಸಿದೆ ಮತ್ತು ಫ್ರಾನ್ಸ್ ಮೂಲದ ಪತ್ರಕರ್ತರು ಜಿ20 ಶೃಂಗಸಭೆಯ ಅಧಿವೇಶನಗಳಿಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಗಮನಕ್ಕೆ ಈ ಘಟನೆ ಬಂದಿದೆ.

ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಪ್ಪಿತಸ್ಥರಿಗಾಗಿ ಹುಡುಕಾಟ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...