ನವದೆಹಲಿ: ದೆಹಲಿಯ ಐಎನ್‌ಎ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರು ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವ್ಯಕ್ತಿಯೊಬ್ಬರು ಮೆಟ್ರೋ ಮುಂದೆ ಜಿಗಿದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್) ಕರೆ ಸ್ವೀಕರಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಪ್ರಯಾಣಿಕರು ಕಣ್ಣೆದುರೇ ನಡೆದ ಘಟನೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಪೊಲೀಸರು ನಿಲ್ದಾಣವನ್ನು ತಲುಪಿ ಪರಿಶೀಲಿಸಿದಾಗ ಆ ವ್ಯಕ್ತಿ ಟ್ರ್ಯಾಕ್ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ವ್ಯಕ್ತಿ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ಸಮಯಪುರ ಬದ್ಲಿ ಕಡೆಗೆ ಮೆಟ್ರೋ ಟ್ರ್ಯಾಕ್‌ಗೆ ಹಾರಿರುವುದು ಕಂಡುಬಂದಿದೆ.
ಮೃತರನ್ನು ರಾಷ್ಟ್ರ ರಾಜಧಾನಿಯ ಸತ್ಯ ನಿಕೇತನ ಪ್ರದೇಶದ ನಿವಾಸಿ 30 ವರ್ಷದ ಅಜಿತೇಜ್ ಎಂದು ಗುರುತಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 174 ರ ಅಡಿಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.