ಬೆಚ್ಚಿಬೀಳಿಸುವಂತಿದೆ ಮೆಕ್ಸಿಕೋದಿಂದ ಭಾರತಕ್ಕೆ ಬಂದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಹಿನ್ನಲೆ

ಮೆಕ್ಸಿಕೋದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ತಂಡದಿಂದ ಬಂಧಿಸಲ್ಪಟ್ಟ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಕರೆತರಲಾಯಿತು.

ಈ ಬಗ್ಗೆ ವಿವರಗಳನ್ನು ನೀಡಿದ ಅಧಿಕಾರಿಗಳು, ವಿಶೇಷ ಸೆಲ್ ದೆಹಲಿ ಪೊಲೀಸರ ಐದು ಸದಸ್ಯರ ತಂಡವು ಭೂಗತ ಪಾತಕಿಯನ್ನು ಮೆಕ್ಸಿಕೊದಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದು ವಿಚಾರಣೆ ನಡೆಸಲಾಗ್ತಿದೆ ಎಂದರು.

ನಮ್ಮ ವಿಶೇಷ ಸೆಲ್ ಸಿಬ್ಬಂದಿಗಳು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು ನಮಗೆ ಸಾಕಷ್ಟು ಸಹಾಯ ಮಾಡಿದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಸಿಬ್ಬಂದಿ ಸಹ ಇಲ್ಲಿ ಇದ್ದಾರೆ. ಇದರೊಂದಿಗೆ ಮೆಕ್ಸಿಕನ್ ಪೋಲಿಸ್ ಮತ್ತು ವಿದೇಶಾಂಗ ವ್ಯವಹಾರಗಳು ನಮಗೆ ಸಹಾಯ ಮಾಡಿದವು ಎಂದು ವಿಶೇಷ ಕೋಶದ ಪೊಲೀಸ್ ಆಯುಕ್ತ (ಸಿಪಿ) ಎಚ್‌ಜಿಎಸ್ ಧಲಿವಾಲ್ ಎಎನ್‌ಐಗೆ ತಿಳಿಸಿದರು.

ದೆಹಲಿ-ಎನ್‌ಸಿಆರ್‌ನಲ್ಲಿ ಆತನಿಗಿಂತ ದೊಡ್ಡ ಭೂಗತ ಪಾತಕಿ ಮತ್ತೊಬ್ಬರಿಲ್ಲ ಎಂದು ವಿಶೇಷ ಸಿಪಿ ಧಲಿವಾಲ್ ಹೇಳಿದ್ದಾರೆ.

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಹಾಯದಿಂದ ಭೂಗತ ಪಾತಕಿಯನ್ನು ಬಂಧಿಸಲು ದೆಹಲಿ ಪೊಲೀಸರು ಭಾರತದ ಹೊರಗೆ ಹೋಗಿದ್ದು ಇದೇ ಮೊದಲು. ಹಾಗಾದರೆ ಯಾರು ಈ ದೀಪಕ್ ? ಈತನ ಹಿನ್ನೆಲೆಯೇನು ಅಂತ ನೋಡೋದಾದ್ರೆ,

27 ವರ್ಷದ ದೀಪಕ್ ಬಾಕ್ಸರ್ ಹರಿಯಾಣದ ಗನ್ನೌರ್ ನಿವಾಸಿ. ಈತ ದೆಹಲಿಯ ಮೋಸ್ಟ್ ವಾಂಟೆಡ್ ಭೂಗತ ಪಾತಕಿ. 2016 ರಲ್ಲಿ ಹರ್ಯಾಣದಲ್ಲಿ ಪೊಲೀಸ್ ಕಸ್ಟಡಿಯಿಂದ ಜಿತೇಂದರ್ ಅಲಿಯಾಸ್ ಗೋಗಿಯನ್ನು ಎಸ್ಕೇಪ್ ಮಾಡಿಸಿ ಈತ ಬೆಳಕಿಗೆ ಬಂದನು.

ಜಿತೇಂದರ್ ಗೋಗಿ ಸಾವಿನ ನಂತರ ದೀಪಕ್ ಆತನ ಗ್ಯಾಂಗ್ ಅನ್ನು ಮುನ್ನಡೆಸುತ್ತಿದ್ದನು. ಜೈಲಿನಲ್ಲಿರುವ ತನ್ನ ಗ್ಯಾಂಗ್ ಸದಸ್ಯರ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಅಮಿತ್ ಗುಪ್ತಾ ಎಂಬ ಬಿಲ್ಡರ್ ನ ಹತ್ಯೆ ಪ್ರಕರಣದಲ್ಲಿ 2022ರ ಸೆಪ್ಟೆಂಬರ್ ನಿಂದ ದೀಪಕ್ ಬಾಕ್ಸರ್ ಗಾಗಿ ಹುಡುಕಾಟ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read