ತೋಟದ ದಾರಿಯಲ್ಲಿ ಮರದ ಎಲೆ ಮುಚ್ಚಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ವಿಡಿಯೋ ಕಾಲ್ ಮಾಡಿದ್ದಕ್ಕೆ ಪತಿಯಿಂದ ಕೃತ್ಯ ಶಂಕೆ

ರಾಮನಗರ: ಕೊಲೆ ಮಾಡಿ ಮರದ ಎಲೆಗಳನ್ನು ಮುಚ್ಚಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಸಮೀಪ ಘಟನೆ ನಡೆದಿದೆ.

27 ವರ್ಷದ ಅಶ್ವಿನಿ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತ್ನಿಯನ್ನು ಪತಿ ರಮೇಶ್(32) ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಪರಿಚಿತರ ಜೊತೆಗೆ ವಿಡಿಯೋ ಕಾಲ್ ಮಾಡಿದ್ದಕ್ಕೆ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.

ಕಳೆದ 10 ವರ್ಷಗಳ ಹಿಂದೆ ಅಶ್ವಿನಿ ಮತ್ತು ರಮೇಶ್ ಮದುವೆಯಾಗಿತ್ತು. ಕೆಲವು ದಿನಗಳಿಂದ ಪತ್ನಿಯ ಮೇಲೆ ಅನುಮಾನಪಟ್ಟು ರಮೇಶ ಜಗಳವಾಡುತ್ತಿದ್ದ. ವಿಡಿಯೋ ಕಾಲ್ ಮಾಡ್ತಾಳೆ ಎಂದು ದಂಪತಿಯ ಮಧ್ಯೆ ಜಗಳ ಶುರುವಾಗಿತ್ತು. ಪತಿ ರಮೇಶನನ್ನು ಬಿಟ್ಟು ಅಶ್ವಿನಿ ತವರು ಮನೆಗೆ ಹೋಗಿದ್ದರು. ಮತ್ತೆ ಜಗಳ ಮಾಡುವುದಿಲ್ಲ ಎಂದು ಕಳೆದ ಭಾನುವಾರ ಪತ್ನಿ ಅಶ್ವಿನಿಯನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಬಂದಿದ್ದರು.

ನಿನ್ನೆಯಿಂದ ಅಶ್ವಿನಿ ಮನೆಯಲ್ಲಿರಲಿಲ್ಲ. ಕಾಲ್ ಕೂಡ ರಿಸೀವ್ ಮಾಡಿರಲಿಲ್ಲ. ಪತಿ ಸಹ ಮನೆಯಲ್ಲಿ ಇಲ್ಲದ ಕಾರಣ ಪೋಷಕರು ಹುಡುಕಾಟ ನಡೆಸಿದ್ದರು. ತೋಟದ ದಾರಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read