
ಸಹೋದರಿಯೊಬ್ಬಳು ಶಾಲಾ ಲೈಬ್ರರಿಯಿಂದ 2006 ರಲ್ಲಿ ಪಡೆದುಕೊಂಡಿದ್ದ ಪುಸ್ತಕವನ್ನು 2022 ರಲ್ಲಿ ಆಕೆಯ ತಮ್ಮ ಪಡೆದುಕೊಂಡು ಬಂದಿರುವ ವಿಷಯವೊಂದು ಟ್ವಿಟರ್ನಲ್ಲಿ ವೈರಲ್ ಅಗಿದೆ. ಶಾಲಾ ಗ್ರಂಥಾಲಯದಿಂದ ಪುಸ್ತಕವನ್ನು ತಾನು ಎರವಲು ಪಡೆದ 16 ವರ್ಷದ ಬಳಿಕ ನಡುವೆ ಇಬ್ಬರೇ ವ್ಯಕ್ತಿಗಳು ಅದನ್ನು ಪಡೆದುಕೊಂಡಿದ್ದರು. ನಂತರ ಅದನ್ನು ತನ್ನ ತಮ್ಮನೇ 2022ರಲ್ಲಿ ತಂದಿರುವುದು ಬಲು ವಿಶೇಷವಾಗಿದೆ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ.
ಹೆಸರುಗಳು ಪುಸ್ತಕದ ರಸೀದಿಯಲ್ಲಿ ಇರುವುದನ್ನು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. “2006 ರಲ್ಲಿ ನಾನು ಈ ಪುಸ್ತಕವನ್ನು ನನ್ನ ಶಾಲೆಯ ಲೈಬ್ರರಿಯಿಂದ ಎರವಲು ಪಡೆದಿದ್ದೆ ಮತ್ತು 2022 ರಲ್ಲಿ ನನ್ನ ಸಹೋದರ ಅದೇ ಪುಸ್ತಕವನ್ನು ಎರವಲು ಪಡೆದಿದ್ದಾನೆ. ಹೆಚ್ಚಿನ ಜನರು ಈ ಪುಸ್ತಕವನ್ನು ಬಯಸಲಿಲ್ಲ” ಎಂದು ಸನಾ ಟ್ವೀಟ್‌ನಲ್ಲಿ ಬರೆದಿದ್ದಾಳೆ.
ತನ್ನ ಮತ್ತು ತಮ್ಮನ ಮನಸ್ಥಿತಿ ಒಂದೇ ತೆರನಾಗಿ ಇರುವುದು ಇದಕ್ಕೆ ಸಾಕ್ಷಿ ಎಂದು ಆಕೆ ಸಂತಸ ಹಂಚಿಕೊಂಡಿದ್ದಾಳೆ. ಪುಸ್ತಕವನ್ನು ಕೊಂಡು ಓದುವ ಅಕ್ಕ-ತಮ್ಮನ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಓದುವುದು ಕಡಿಮೆಯಾಗಿರುವ ಈ ದಿನಗಳಲ್ಲಿ ಇಂಥ ಸಂಸ್ಕೃತಿ ಹೆಚ್ಚೆಚ್ಚು ಬೆಳೆಯಬೇಕು ಎಂದಿದ್ದಾರೆ.
https://twitter.com/affable_lad/status/1617219923498909697?ref_src=twsrc%5Etfw%7Ctwcamp%5Etweetembed%7Ctwterm%5E161721