ಉಪ್ಪು, ಹುಳಿ, ಖಾರವಿದ್ದರೆ ಅಡುಗೆ ರುಚಿಯಾಗಿರುತ್ತದೆ. ಹಾಗಾಗಿ ಅಡುಗೆಗಳಲ್ಲಿ ಖಾರಕ್ಕಾಗಿ ಮೆಣಸನ್ನು ಬಳಸುತ್ತಾರೆ. ಆದರೆ ಇದನ್ನು ಸೇವಿಸಿದರೆ ಕೆಲವರಿಗೆ ಬಾಯಲ್ಲಿ ಉರಿ ಶುರುವಾಗುತ್ತದೆ. ಅಂತವರು ತಕ್ಷಣ ನಿಮ್ಮ ಬಾಯಿ ಉರಿಯನ್ನು ಕಡಿಮೆ ಮಾಡಿಕೊಳ್ಳಲು ಈ ಪರಿಹಾರಗಳನ್ನು ಮಾಡಿ.
* ಖಾರದ ಉರಿಯನ್ನು ಕಡಿಮೆ ಮಾಡಲು ಡೈರಿ ಉತ್ಪನ್ನಗಳನ್ನು ಸೇವಿಸಿ. ತಣ್ಣಗಾದ ಹಾಲು, ಮೊಸರು, ಚೀಸ್ ಸೇವಿಸಿ. ಇವು ಹಾಲಿನ ಉತ್ಪನ್ನವಾದ್ದರಿಂದ ಇದರಲ್ಲಿರುವ ಅಂಶ ಸುಡುವ ವೇದನೆಯನ್ನು ಕಡಿಮೆ ಮಾಡಿ ತಕ್ಷಣ ಪರಿಹಾರ ನೀಡುತ್ತದೆ.
* ಖಾರದ ಉರಿಯಿಂದ ಪಾರಾಗಲು ಆಮ್ಲೀಯ ಆಹಾರವನ್ನು ಸೇವಿಸಿ. ಟೊಮೆಟೊ, ಅನಾನಸ್ ಮುಂತಾದವುಗಳನ್ನು ಸೇವಿಸಿ. ಇವು ಮಸಾಲೆಯುಕ್ತ ಆಹಾರದಿಂದ ಉಂಟಾಗುವ ಸುಡುವ ವೇದನೆಯ ವಿರುದ್ಧ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.