BIG NEWS: ಡಿಸಿ, ಎಸ್ ಪಿ ಎದುರಲ್ಲೇ ರೌಡಿ ಶೀಟರ್ ಗೆ ಅಧಿಕಾರಿಗಳ ಕೈಯಿಂದ ಸನ್ಮಾನ; ಭಾರಿ ಆಕ್ರೋಶಕ್ಕೆ ಕಾರಣವಾಯ್ತು ಕಾಂಗ್ರೆಸ್ ಶಾಸಕನ ನಡೆ

ಮಂಡ್ಯ: ಕಾಂಗ್ರೆಸ್ ಶಾಸಕರೊಬ್ಬರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮುಂದೆಯೇ ರೌಡಿ ಶೀಟರ್ ಓರ್ವನಿಗೆ ಸನ್ಮಾನ ಮಾಡಿದ್ದು, ವಿಪಕ್ಷ ನಾಯಕರ ಕೆಂಗಣ್ಣಿಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಎದುರೇ, ರೌಡಿಶೀಟರ್ ದೆವರಾಜು ಅಲಿಯಾಸ್ ಬುಲ್ಲಿ ಎಂಬಾತನಿಗೆ ಸನ್ಮಾನ ಮಾಡಿದ್ದಾರೆ. ಈತ ಗ್ರಾಮ ಪಂಚಾಯತ್ ಸದಸ್ಯನೂ ಆಗಿದ್ದು ಸನ್ಮಾನದ ಬಳಿಕ ರೌಡಿಶೀಟರ್ ಶಾಸಕರ ಕಾಲಿಗೆ ನಮಸ್ಕರಿಸಿರುವ ಪೊಟೋ, ಇಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶಾಸಕ ರಮೇಶ್, ಅಧಿಕಾರಿಗಳ ಕೈಯಿಂದಲೇ ರೌಡಿಶೀಟರ್ ಗೆ ಸನ್ಮಾನಿಸಿ ಅಧಿಕಾರಿಗಳಿಗೆ ಮುಜುಗರವುಂಟಾಗುವಂತೆ ಮಾಡಿದ್ದಾರೆ. ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ದೇವರಾಜು ನನ್ನು ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ಆತನನ್ನು ವೇದಿಕೆಗೆ ಕರೆದು ಸನ್ಮಾನ ಮಾಡಿರುವ ಕಾಂಗ್ರೆಸ್ ಶಾಸಕರ ವರ್ತನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read