ಆನ್ ಲೈನ್‌ನಲ್ಲಿ ಒಳ ಉಡುಪುಗಳನ್ನು ಪ್ರದರ್ಶಿಸುವ ಮಹಿಳಾ ಮಾಡೆಲ್‌ಗಳ ಮೇಲೆ ಚೀನಾ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಚೀನೀ ಲೈವ್‌ಸ್ಟ್ರೀಮ್ ಫ್ಯಾಷನ್ ಕಂಪನಿಗಳು ತಮ್ಮ ವೀಡಿಯೊಗಳಲ್ಲಿ ಪುರುಷ ಮಾಡೆಲ್‌ಗಳನ್ನು ಮಹಿಳೆಯರ ಒಳ ಉಡುಪು ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮಹಿಳೆಯರು ಮಾಡೆಲಿಂಗ್ ಮಾಡುವಾಗ ಒಳ ಉಡುಪುಗಳನ್ನು ಧರಿಸಿಕೊಂಡರೆ, ಅದು ಅಶ್ಲೀಲತೆಯನ್ನು ಹರಡುತ್ತದೆ. ಇದು ದೇಶದ ಕಾನೂನಿನ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.
ಈ ನಿಷೇಧದ ಬಗ್ಗೆ ಕೆಲವು ಕಂಪೆನಿಗಳು ಅಸಮಾಧಾನ ವ್ಯಕ್ತಪಡಿಸಿವೆ. ಮಹಿಳೆಯರನ್ನು ನೇಮಕ ಮಾಡಿಕೊಳ್ಳಬಾರದ ಹಿನ್ನೆಲೆಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ತೋರಿಸಲು ಬೇರೆ ದಾರಿ ಕಾಣದೇ ಪುರುಷ ಮಾಡೆಲ್‌ಗಳನ್ನು ನೇಮಿಸಿಕೊಳ್ಳಲು ಶುರುಮಾಡಿವೆ.
ಒಳ ಉಡುಪು ಮಾತ್ರವಲ್ಲದೇ ಬಿಗಿಯಾದ ಕಾರ್ಸೆಟ್‌ಗಳು ಮತ್ತು ಲೇಸ್-ಟ್ರಿಮ್ ಮಾಡಿದ ನೈಟ್ ಗೌನ್ ಗಳನ್ನು ಕೂಡ ಮಹಿಳೆಯರು ಮಾಡೆಲಿಂಗ್ ನಲ್ಲಿ ಬಳಸುವಂತಿಲ್ಲ. ಆದ್ದರಿಂದ ಇವುಗಳಿಗೂ ಪುರುಷರೇ ಕಾಣಿಸಿಕೊಳ್ಳುತ್ತಿದ್ದಾರೆ.