ಹಾಲು – 2 ಲೀಟರ್, ಸಕ್ಕರೆ – 500 ಗ್ರಾಂ, ಹಾಲಿನ ಪುಡಿ – 200 ಗ್ರಾಂ.
ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಹಾಲನ್ನ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಲು ಇಡಿ. ಈ ಹಾಲು ಅರ್ಧದಷ್ಟಾಗುವರವರೆಗೂ ಕಾಯಿಸಿ. ಹಾಲು ಅರ್ಧದಷ್ಟು ಆದ ಕೂಡಲೇ ಸಕ್ಕರೆಯನ್ನ ಹಾಕಿ ಕೆಲ ಕಾಲ ಕುದಿಸಿ.ಕೆಲ ನಿಮಿಷಗಳ ಬಳಿಕ ಹಾಲಿನ ಪುಡಿಯನ್ನ ಹಾಕಿ.
ಈ ಮಿಶ್ರಣವು ಹದಕ್ಕೆ ಬಂದ ಬಳಿಕ ತುಪ್ಪ ಸವರಿದ ತಟ್ಟೆಗೆ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಳಿಕ ಸವಿಯಲು ನೀಡಿ.