25 ರೂ. ಉಳಿಸಲು ಹೋಗಿ 3 ಸಾವಿರ ದಂಡ ಕಟ್ಟಿದ ಫ್ಲಿಪ್ಕಾರ್ಟ್; ಇಲ್ಲಿದೆ ವಿವರ

ಪರ್ಸ್‌ ಹಿಂಪಡೆಯಲು 25 ರೂಪಾಯಿ ಶುಲ್ಕ ಕೇಳಿದ್ದ ಫ್ಲಿಪ್‌ ಕಾರ್ಟ್‌ ತಲೆ ಮೇಲೆ 3 ಸಾವಿರ ದಂಡ ಬಿದ್ದಿದೆ. ಚಂಡೀಗಢದ ಗುರ್ಬಚನ್ ಕೌರ್‌, ಅಕ್ಟೊಬರ್‌ 1, 2023ರಂದು ಫ್ಲಿಪ್‌ ಕಾರ್ಟ್‌ ಮೂಲಕ ZAPKAP ಇಂಡಿಯಾ ಮಾರಾಟ ಮಾಡಿದ ಪರ್ಸ್‌ ಒಂದನ್ನು ಖರೀದಿ ಮಾಡಿದ್ದರು. ಈ ಪರ್ಸ್‌ ಬೆಲೆ 245 ರೂಪಾಯಿ. ಆದ್ರೆ ಮನೆಗೆ ಫ್ಲಿಪ್‌ ಕಾರ್ಟ್‌, ಕೌರ್‌ ಆರ್ಡರ್‌ ಮಾಡಿದ್ದ ಪರ್ಸ್‌ ಗಿಂತ ಭಿನ್ನವಾದ ಪರ್ಸ್‌ ಕಳುಹಿಸಿತ್ತು.

ಈ ಸಮಯದಲ್ಲಿ ಗುರ್ಬಚನ್‌ ಕೌರ್‌, ಪರ್ಸ್‌ ವಾಪಸ್‌ ಮಾಡಲು ಮುಂದಾಗಿದ್ದರು. ಆದ್ರೆ ಫ್ಲಿಪ್‌ ಕಾರ್ಟ್‌, ಪರ್ಸ್‌ ವಾಪಸ್‌ ತೆಗೆದುಕೊಳ್ಳಬೇಕೆಂದ್ರೆ 25 ರೂಪಾಯಿ ಮರುಪಾವತಿ ಶುಲ್ಕ ನೀಡಬೇಕು. ಶುಲ್ಕ ಪಾವತಿ ಮಾಡುವವರೆಗೂ ಫ್ಲಿಪ್‌ ಕಾರ್ಟ್‌ ರಿಟರ್ನ್‌ ಸ್ವೀಕರಿಸಿರಲಿಲ್ಲ. ಈ ಸಂಬಂಧ ಕೌರ್‌, ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕೌರ್‌, ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಫ್ಲಿಟ್‌ ಕಾರ್ಟ್‌ ವಿರುದ್ಧ ತೀರ್ಪು ನೀಡಿದೆ. ಫ್ಲಿಪ್‌ ಕಾರ್ಟ್‌, ಪರ್ಸ್‌ ಮೊತ್ತ 245 ರೂಪಾಯಿ ಹಾಗೂ ಕೌರ್‌, ನ್ಯಾಯಾಲಯ, ದೂರು ಸೇರಿದಂತೆ ವಿಚಾರಣೆಗೆ ಖರ್ಚು ಮಾಡಿದ ಹಣ, ಮಾನಸಿಕ ಹಿಂಸೆ, ಕಿರುಕುಳಕ್ಕೆ ಪರಿಹಾರವಾಗಿ ಹೆಚ್ಚುವರಿ 3 ಸಾವಿರ ರೂಪಾಯಿಯನ್ನು ಫ್ಲಿಪ್‌ ಕಾರ್ಟ್‌ ನೀಡಬೇಕೆಂದು ನ್ಯಾಯಾಲಯ ಸೂಚನೆ ನೀಡಿದೆ.

ದೂರುದಾರರು ತಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ZapCap ನಿಂದ ಉತ್ಪನ್ನವನ್ನು ಖರೀದಿಸಿದ್ದಾಗಿ ಹೇಳಿದ್ದಾರೆ. ಆದ್ರೆ ಉತ್ಪನ್ನದ ತಯಾರಕರು ಅಥವಾ ಮಾರಾಟಗಾರರು ನಾವಲ್ಲದ ಕಾರಣ, ತಮ್ಮ ವಿರುದ್ಧ ಸಲ್ಲಿಸಿರುವ ದೂರನ್ನು ವಜಾ ಮಾಡಬೇಕೆಂದು ಫ್ಲಿಪ್‌ ಕಾರ್ಟ್‌ ವಾದ ಮಂಡಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read