ಇಸ್ರೇಲ್ : ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಇಂದು ಹಮಾಸ್ ಉಗ್ರರ ಮೇಲೆ ವಾಯುದಾಳಿ ಮತ್ತು ದಿಗ್ಬಂಧನದ ಬಳಿಕ ಗಾಜಾ ಮೇಲ ಭೂದಾಳಿಗೆ ಇಸ್ರೇಲ್ ಸೇನೆ ಸಕಲ ಸಿದ್ಧತೆ ಆರಂಭಿಸಿದೆ.
ಈ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರತಿಯೊಬ್ಬ ಹಮಾಸ್ ಸದಸ್ಯನೂ ಸತ್ತ ಎಂದು ತಿಳಿಯಿರಿ, ಹಮಾಸ್ ಸಂತಾನವನ್ನೇ ನಾವು ಹೊಸಕಿ ಹಾಕುತ್ತೇವೆ. ಐಸಿಸ್ ರೀತಿ ಹಮಾಸ್ ಅನ್ನು ಹೊಸಕಿ ಹಾಕುತ್ತೇವೆ ಎಂದುಹೇಳಿದ್ದಾರೆ. ಈ ಮೂಲಕ ಗಾಜಾ ಪಟ್ಟಿಗೆ ನುಗ್ಗಿ ಹಮಾಸ್ ಉಗ್ರರ ಮೇಲೆ ಅಂತಿ ದಾಳಿ ಆರಂಭಿಸಲು ಇಸ್ರೇಲ್ ಸರ್ವಸನ್ನದ್ಧವಾಗಿದೆ.
ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿದ ಭಾರೀ ಬಾಂಬ್ ದಾಳಿಯ ನಂತರ ಗಾಝಾ ಪಟ್ಟಿಯಲ್ಲಿರುವ 423,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು ಎಂದು ವಿಶ್ವಸಂಸ್ಥೆ ತಿಳಿಸಿದೆ.
ಗುರುವಾರ ತಡರಾತ್ರಿಯ ವೇಳೆಗೆ, ಗಾಝಾದಲ್ಲಿ ಸ್ಥಳಾಂತರಗೊಂಡವರ ಸಂಖ್ಯೆ 84,444 ರಷ್ಟು ಏರಿಕೆಯಾಗಿ 423,378 ಕ್ಕೆ ತಲುಪಿದೆ ಎಂದು ಯುಎನ್ ಮಾನವೀಯ ಸಂಸ್ಥೆ ಒಸಿಎಚ್ಎ ಶುಕ್ರವಾರ ಕಳುಹಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಶನಿವಾರದ ಅನಿರೀಕ್ಷಿತ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ದಾಳಿ ನಡೆಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ, ಇದು 1948 ರಲ್ಲಿ ಗಾಝಾ ರಚನೆಯ ನಂತರದ ಅತ್ಯಂತ ಭೀಕರ ದಾಳಿಯಾಗಿದೆ.
ಹಮಾಸ್ ಬಂದೂಕುಧಾರಿಗಳು ಸಣ್ಣ ಪಟ್ಟಣಗಳು, ಕಿಬ್ಬುಟ್ಜಿಮ್ ಮತ್ತು ಮರುಭೂಮಿಯ ಸಂಗೀತ ಉತ್ಸವಕ್ಕೆ ನುಗ್ಗಿ, 1,200 ಕ್ಕೂ ಹೆಚ್ಚು ಜನರನ್ನು ವಿವೇಚನೆಯಿಲ್ಲದೆ ಕೊಂದರು ಮತ್ತು ಸುಮಾರು 150 ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆದೊಯ್ದರು.
ಇಸ್ರೇಲ್ನಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು.