HomeEntertainmentBIG NEWS: ಮೈಸೂರಿನಲ್ಲಿ ಮತ್ತೆ 'ಡೆವಿಲ್' ಶೂಟಿಂಗ್ ಗೆ ಮುಹೂರ್ತ ಫಿಕ್ಸ್: ಚಿತ್ರೀಕರಣಕ್ಕೆ ಸಿದ್ಧನಾದ ನಟ...

BIG NEWS: ಮೈಸೂರಿನಲ್ಲಿ ಮತ್ತೆ ‘ಡೆವಿಲ್’ ಶೂಟಿಂಗ್ ಗೆ ಮುಹೂರ್ತ ಫಿಕ್ಸ್: ಚಿತ್ರೀಕರಣಕ್ಕೆ ಸಿದ್ಧನಾದ ನಟ ದರ್ಶನ್

ಮೈಸೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್, ಮತ್ತೆ ಸಿನಿಮಾ ಶೂಟಿಂಗ್ ನಲ್ಲಿ ತೊಡಗಲು ಸಿದ್ಧತೆ ನಡೆಸಿದ್ದಾರೆ.

ನಾಳೆಯಿಂದ ನಟ ದರ್ಶನ್ ಮೈಸೂರಿನಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶೂಟಿಂಗ್ ಗೆ ನಟ ದರ್ಶನ ಗೆ ಡಿಸಿಪಿ ಮುತ್ತುರಾಜ್ ಅನುಮತಿ ನೀಡಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ. ಮಾರ್ಚ್ 12ರಿಂದ 14ರವರೆಗೆ ಅತಿಥಿಗೃಹದಲ್ಲಿ ಚಿತ್ರ‍ೀಕರಣ ನಡೆಯಲಿದೆ. ಮಾರ್ಚ್ 15ರಂದು ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಚಿತ್ರೀಕರಣ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಒಂದು ಪಾಳಿಯಲ್ಲಿ 10 ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular