ಚಿಕ್ಕಮಗಳೂರು : ಕಡೂರಿನಲ್ಲಿ ಡೈನಾಮೈಟ್ ಸ್ಪೋಟಗೊಂಡು ರೈತನ ಸ್ಥಿತಿ ಗಂಭೀರವಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಸೇವಾಪುರದಲ್ಲಿ ನಡೆದಿದೆ.
ಕಲ್ಲು ಕ್ವಾರಿಯಲ್ಲಿ ಡೈನಾಮೈಟ್ ಇಡಲಾಗಿದ್ದು, ಅದು ಸ್ಪೋಟಗೊಂಡು ಇದೇ ವೇಳೆ ಜಮೀನಿಗೆ ತೆರಳುತ್ತಿದ್ದ ರೈತ ಸಿದ್ದನಾಯ್ಕ್ ಮೇಲೆ ಕಲ್ಲು ಬಂದು ಬಡಿದಿದೆ ಎಂದು ಹೇಳಲಾಗಿದೆ.ಸದ್ಯ ರೈತ ಸಿದ್ದನಾಯ್ಕ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರಿಗೆ ಮಾಹಿತಿ ನೀಡದೇ ಡೈನಾಮೈಟ್ ಸ್ಪೋಟಿಸಲಾಗಿದ್ದು, ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.