ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ಶುರುವಾಗಿದ್ದು, ವಿದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರ ಎರಿಸ್ EG.5 ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಒಮಿಕ್ರಾನ್ ರೂಪಾಂತರ ಉಪತಳಿ ಎರಿಸ್ EG.5 ಸದ್ಯ ಅತೀ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಅಮೆರಿಕ, ಜಪಾನ್, ಬ್ರಿಟನ್ ಗಳಲ್ಲಿ ಅಬ್ಬರಿಸುತ್ತಿದ್ದು, ರಾಜ್ಯಕ್ಕೂ ಸೋಂಕು ಕಾಲಿಡುವ ಆತಂಕ ಸೃಷ್ಟಿಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಜ್ವರ, ಕೆಮ್ಮು, ಶೀಥ, ತಲೆನೋವು, ಸ್ನಾಯುಸೆಳೆತ, ಗಂಟಲು ನೋವು, ಮೂಗಿನಲ್ಲಿ ಸೋರಿಕೆ, ವಾಂತಿ, ವಾಕರಿಕೆಯಂತಹ ಲಕ್ಷಣ ಕಂಡುಬಂದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿಯಾಗಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕಳೆದ ಕೆಲವು ವಾರಗಳಲ್ಲಿ, ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚುತ್ತಿವೆ. ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಇತ್ತೀಚೆಗೆ ಪತ್ತೆಯಾದ ಎರಿಸ್ EG.5 ಎಂಬ ಕೋವಿಡ್ -19 ತಳಿಯನ್ನು ಪತ್ತೆಹಚ್ಚುತ್ತಿದೆ ಎಂದು ಘೋಷಿಸಿತು. ವಿಶ್ವ ಆರೋಗ್ಯ ಸಂಸ್ಥೆ ಎರಿಸ್ EG.5 ತಳಿಯನ್ನು ಅದರ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ “ಮೇಲ್ವಿಚಾರಣೆಯಲ್ಲಿರುವ ರೂಪಾಂತರ” ಎಂದು ವರ್ಗೀಕರಿಸಿದ ನಂತರ ಇದು ಬಂದಿದೆ.
ಎರಿಸ್ EG.5 ರೂಪಾಂತರವು ಪ್ರಸ್ತುತ ಹರಡುತ್ತಿರುವ ಕರೋನವೈರಸ್ನ ತಳಿಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ. ಎರಿಸ್ EG.5ಒಡ್ಡಬಹುದಾದ ಬೆದರಿಕೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಡೇಟಾದ ಅಗತ್ಯವಿದೆ ಎಂದು ಯುಎನ್ ಏಜೆನ್ಸಿ ಹೇಳಿದೆ.