ಬೆಂಗಳೂರು : ರಾಜ್ಯ ಸರ್ಕಾರವು ಜನತೆಗೆ ಬಿಗ್ ಶಾಕ್ ನೀಡಿದ್ದು, ಶೀಘ್ರವೇ ಜನನ,ಮರಣ ಪ್ರಮಾಣಪತ್ರದ ಶುಲ್ಕವನ್ನು 10 ಪಟ್ಟು ಹೆಚ್ಚಳಕ್ಕೆ ಮುಂದಾಗಿದೆ.
ರಾಜ್ಯ ಸರ್ಕಾರವು ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಈಗಿರುವ ಶುಲ್ಕವನ್ನು 10 ಪಟ್ಟು ಹೆಚ್ಚಿಸಲು ಸಿದ್ಧತೆ ನಡೆಸಿದ್ದು, ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಶುಲ್ಕ ಪರಿಷ್ಕರಣೆ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.
ಜನನ, ಮರಣ ಪ್ರಮಾಣಪತ್ರ ಪಡೆಯಲು ಸದ್ಯ (21 ದಿನಗಳ ಒಳಗೆ) ಯಾವುದೇ ಶುಲ್ಕವಿಲ್ಲ. ಆದರೆ ಪರಿಷ್ಕರತ ಆದೇಶದಲ್ಲಿ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. 21 ರಿಂದ 30 ದಿನಗಳವರೆಗೆ 2 ರೂಪಾಯಿ ಇದ್ದ ಶುಲ್ಕ 200 ರೂ.ಆಗಲಿದೆ. 1 ತಿಂಗಳಿನಿಂದ ವರ್ಷದೊಳಗೆ 5 ರೂಪಾಯಿ ಇದ್ದ ಶುಲ್ಕವನ್ನು 500 ರೂ.ಗೆ ಹಾಗೂ 1 ವರ್ಷದ ನಂತರ ಪ್ರಮಾಣ ಪತ್ರಕ್ಕೆ 10 ರೂ. ಬದಲಿಗೆ 1,000 ರೂ.ಗೆ ಏರಿಸಲಾಗಿದೆ.