ಬೆಂಗಳೂರು: ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾದಲ್ಲಿ ಕ್ರಿಸ್ ಮಸ್ ಅಲಂಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಹಾಗೂ ಸೆಕ್ಯುರಿಟಿ ಏಜೆಂಟ್ ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಮಾಲ್ ಆಫ್ ಏಷ್ಯಾದಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ 38 ವರ್ಷದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಎಫ್ಐಆರ್ ಪ್ರಕಾರ, ಪುನೀತ್ ಕೆರೆಹಳ್ಳಿ ಮತ್ತು ಅವರ ನಾಲ್ವರು ಸ್ನೇಹಿತರು ಡಿಸೆಂಬರ್ 23 ರಂದು ಮಧ್ಯಾಹ್ನ ಮಾಲ್ ಗೆ ಭೇಟಿ ನೀಡಿ, ಮಾಲ್ ಅನ್ನು ಕ್ರಿಶ್ಚಿಯನ್ ಹಬ್ಬಗಳಿಗೆ ಮಾತ್ರ ಏಕೆ ಅಲಂಕರಿಸಿದ್ದೀರಿ..? ಆದರೆ ಹಿಂದೂ ಹಬ್ಬಗಳಿಗೆ ಏಕೆ ಅಲಂಕರಿಸಲಿಲ್ಲ ಎಂದು ಸೆಕ್ಯುರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಅವರನ್ನು ಪ್ರಶ್ನಿಸಿದ್ದಾರೆ. 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯಾಗುವಾಗ ಮಾಲ್ ಅನ್ನು ಅಲಂಕರಿಸಬೇಕು ಎಂದು ಕೆರೆಹಳ್ಳಿ ಒತ್ತಾಯಿಸಿದರು.
ಕೆರೆಹಳ್ಳಿ ಮತ್ತು ಅವರ ಸ್ನೇಹಿತರು ತಮ್ಮನ್ನು ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಮಾಲ್ ಗೆ ಭೇಟಿ ನೀಡುವ ಜನರನ್ನು ಒಳಗೆ ಹೋಗದಂತೆ ಕೇಳಿಕೊಂಡಿದ್ದಾರೆ ಎಂದು ಸೆಕ್ಯುರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಆರೋಪಿಸಿದ್ದಾರೆ. ಡಿಸೆಂಬರ್ 25 ಮತ್ತು 31 ರಂದು ಆಚರಣೆಗಳನ್ನು ನಿಲ್ಲಿಸುವುದಾಗಿ ಕೆರೆಹಳ್ಳಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಐಪಿಸಿ ಸೆಕ್ಷನ್ 506 (ಅಪರಾಧ ಮಾಡಲು ಯಾವುದೇ ವರ್ಗ ಅಥವಾ ಸಮುದಾಯವನ್ನು ಪ್ರಚೋದಿಸುವ ಉದ್ದೇಶ), 506 ((Criminal Intimidation), 341 (wrongful restraint), 143 ((Unlawful Assembly)) ಮತ್ತು ಇತರ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.