ಬೆಂಗಳೂರು: ಮರಳು ಮಾಫಿಯಾಗೆ ಕಲಬುರ್ಗಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಬಲಿ ಪ್ರಕರಣನ್ನು ತನಿಖೆ ನಡೆಸುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕಲಬುರ್ಗಿ ಎಸ್.ಪಿ.ಗೆ ಆದೇಶ ನೀಡಿದ್ದಾರೆ.
ಮರಳು ಮಾಫಿಯಾ ತಡೆಯಲು ಮುಂದಾಗಿದ್ದ ಹೆಡ್ ಕಾನ್ಸ್ ಟೇಬಲ್ ಚೌಹಾಣ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಹಲ್ಲೆಯ ಪ್ರಮುಖ ಆರೋಪಿ ಸಿದ್ದಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಸಾಯಿಬಣ್ಣ ಕರಜಗಿ ಎಂಬಾತ ನಾಪತ್ತೆಯಾಗಿದ್ದು, ಆರೋಪಿ ಪತ್ತೆಗೆ ಶೋಧ ನಡೆದಿದೆ.
ಮರಳು ಮಾಫಿಯಾಗೆ ಹೆಡ್ ಕಾನ್ಸ್ ಟೇಬಲ್ ಬಲಿ ಪ್ರಕರಣವನ್ನು ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವರು ಆದೇಶ ನೀಡಿದ್ದಾರೆ. ಅಲ್ಲದೇ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.