ಗದಗ : ಗದಗದಲ್ಲಿ ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ನಿಗೂಢವಾಗಿ ಸಾವನ್ನಪ್ಪಿದ್ದು, ಅತ್ತೆ, ಭಾವನ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
‘ನನ್ನ ಸಾವಿಗೆ ಅತ್ತೆ, ಭಾವ ಕಾರಣ..ಸ್ವಾರಿ ಅಪ್ಪ, ಅಮ್ಮ’ ಎಂದು ಡೆತ್ ನೋಟ್ ಬರೆದಿಟ್ಟು ಪೂಜಾ ಅಯ್ಯನಗೌಡ್ರು ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಳ್ಳಾರಿ ಮೂಲದ ಪೂಜಾಗೆ ಗದಗದ ಅಮರೇಶ್ ಜೊತೆ ವಿವಾಹವಾಗಿತ್ತು. ನನಗೆ ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೂಜಾ ಇತ್ತೀಚೆಗೆ ಪೋಷಕರ ಮುಂದೆ ಕಣ್ಣೀರು ಹಾಕಿದ್ದರು. ಆದರೆ ಮದುವೆಯಾದ 4 ತಿಂಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪೂಜಾ ಶವ ಪತ್ತೆಯಾಗಿದೆ. ಪೂಜಾ ಅತ್ತೆ ಹಾಗೂ ಭಾವನ ವಿರುದ್ಧ ಕಠಿಣ ಕ್ರಮಕ್ಕೆ ಪೂಜಾ ಪೋಷಕರು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
TAGGED:ಅತ್ತೆ-ಭಾವನ ಕಿರುಕುಳ